ನಾಪೋಕ್ಲು; ಬಲಿಜ ಸಮುದಾಯದವರಿಂದ ಶ್ರೀ ಯೋಗಿ ನಾರಾಯಣ ಕೈವಾರ ತಾತಯ್ಯ ನವರ ಜಯಂತಿ ಆಚರಣೆ
ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು:ನಾಪೋಕ್ಲುವಿನಲ್ಲಿ ಬಲಿಜಸಮುದಾಯದವರಿಂದ ಶ್ರೀ ಯೋಗಿ ನಾರಾಯಣ ಕೈವಾರ ತಾತಯ್ಯನವರ 300ನೇ ಜಯಂತಿಯನ್ನು ನಾಪೋಕ್ಲು ಬಳಿಯ ಕಕ್ಕುಂದ ಕಾಡುವಿನ ಟಿ.ವಿ.ಭವಾನಿಯವರ ಗೃಹದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕಕ್ಕುಂದ ಕಾಡು ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಾಲಯದ ಅಧ್ಯಕ್ಷ ಗೋಪಾಲ ಅವರು ಪಾಲ್ಗೊಂಡು ಮಾತನಾಡಿ ತೆಲುಗು ಬಲಿಜಗರಿಗೆ ಶಿಕ್ಷಣದಂತೆ ಉದ್ಯೋಗದಲ್ಲಿಯೂ ಸಹ 2ಎ ಹಿಂದುಳಿದ ವರ್ಗದಡಿ ಮೀಸಲಾತಿ ನೀಡುವಂತಾಗಬೇಕು. ನಮ್ಮ ಊರಿನ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಾಲಯ ಜೀರ್ಣೋದ್ಧಾರ ಕಾರ್ಯ ಪ್ರಗತಿಯಲ್ಲಿದ್ದು ಇದಕ್ಕೆ ಸರ್ವ ಜನತೆಯ ಸಹಕಾರ ಬೇಕೆಂದು ವಿನಂತಿಸಿಕೊಂಡರು.
ದೇವಾಲಯಕ್ಕೆ ಧನಸಹಾಯ ಮಾಡುವವರು 9741548389,9980010635 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳುವಂತೆ ತಿಳಿಸಿದರು. ಟಿ.ಮಂಜಯ್ಯ ಅವರು ಕೈವಾರ ತಾತಯ್ಯ ಅವರ ಹಿನ್ನೆಲೆ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಬಲಿಜ ಸಮಾಜದ ಸದಸ್ಯರು ಕೈವಾರ ತಾತಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.
ಈ ಸಂದರ್ಭ ಕಾರ್ಯಕ್ರಮದಲ್ಲಿ ಎಂ. ಪಿ. ಪದ್ಮನಾಭ, ಟಿ.ವಿ ಪ್ರೇಮಾವತಿ,ಎನ್.ಎಸ್. ಸೂರ್ಯ,ಟಿ.ವಿ ಭವಾನಿ,ವೀಣಾ,ಸರಸ್ವತಿ,ಸುಮಾ,ಆಶಾಲತಾ,ಜಯಮ್ಮ,ಮತ್ತಿತರರು ಹಾಜರಿದ್ದರು.