ಹೊದ್ದೂರು: ಪರಿಶಿಷ್ಟ ಜನಾಂಗದ ಸ್ಮಶಾನಕ್ಕೆ ರಸ್ತೆ ಸಂಪರ್ಕ ಕಲ್ಪಿಸಲು ಸ್ಪಂದಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಎ ಹಂಸ ಕೊಟ್ಟಮುಡಿ

ಹೊದ್ದೂರು: ಪರಿಶಿಷ್ಟ ಜನಾಂಗದ ಸ್ಮಶಾನಕ್ಕೆ ರಸ್ತೆ ಸಂಪರ್ಕ ಕಲ್ಪಿಸಲು ಸ್ಪಂದಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಎ ಹಂಸ ಕೊಟ್ಟಮುಡಿ

ಮಡಿಕೇರಿ: ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಚ್.ಎ ಹಂಸ ಕೊಟ್ಟಮುಡಿ ಅವರು ಬುಧವಾರ ಹೊದ್ದೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕಣ್ಣ 

ಬಲಮುರಿಯಲ್ಲಿ ಮರಣ ಹೊಂದಿದ್ದ ಕುಮಾರ್ ರವರ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.ಈ ಸಂದರ್ಭದ ಹೊಳೆಕೆರೆಯಲ್ಲಿ ಪರಿಶಿಷ್ಟ ಜನಾಂಗದ ಸ್ಮಶಾನಕ್ಕೆ ತೆರಳಲು ಸೂಕ್ತ ರಸ್ತೆಯಿಲ್ಲದರ ಬಗ್ಗೆ ಕೂಡಲೇ ಸ್ಪಂದಿಸಿದ ಎಚ್.ಎ ಹಂಸ ಅವರು, ಆದಷ್ಟು ಬೇಗ ರಸ್ತೆ ಸಂಪರ್ಕ ಕಲ್ಪಿಸಿಕೊಡಲು ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕರಿಗೆ ಕರೆ ಮೂಲಕ ಮಾಹಿತಿ ನೀಡಿದರು. ಅದಲ್ಲದೇ ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ ಅವರ ಗಮನಕ್ಕೆ ತಂದು ರಸ್ತೆ ಸಮಸ್ಯೆ ಸರಿಪಡಿಸುವುದಾಗಿ ಭರವಸೆ ನೀಡಿದರು. ಹಾಗೂ ಸ್ಮಶಾನಕ್ಕೆ ಶೆಡ್ ವ್ಯವಸ್ಥೆಯನ್ನು ಶಾಸಕರ ಮೂಲಕ ಒದಗಿಸುವುದಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಎ ಹಂಸ ಕೊಟ್ಟಮುಡಿ ಭರವಸೆ ನೀಡಿದರು. ಈ ಸಂದರ್ಭದ ಹೊದ್ದೂರು ಪಂಚಾಯತ್ ಸದಸ್ಯ ಎಂ.ಬಿ ಹಮೀದ್ ಇದ್ದರು.