ಕಂಬಿಬಾಣೆ:18 ವರ್ಷ ಪ್ರಾಯದ ಹೆಣ್ಣಾನೆ ಸಾವು

ಕಂಬಿಬಾಣೆ:18 ವರ್ಷ ಪ್ರಾಯದ ಹೆಣ್ಣಾನೆ ಸಾವು

ಸುಂಟಿಕೊಪ್ಪ:ಸಮೀಪದ ಕಂಬಿಬಾಣೆ ಊರುಗುಪ್ಪೆ ಪೈಸಾರಿ ಬಳಿಯ ತೋಟವೊಂದರಲ್ಲಿ 18 ವರ್ಷ ಪ್ರಾಯದ ಹೆಣ್ಣಾನೆಯ ಕಳೇಬರವು ಗುರುವಾರ ಪತ್ತೆಯಾಗಿದೆ.

ಕಾಡಾನೆಗಳ ನಡುವಿನ ಕಾದಾಟದಲ್ಲಿ ಈ ಹೆಣ್ಣಾನೆ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು,ಜೂ.25ರ ರಾತ್ರಿ ಘಟನೆ ನಡೆದಿದೆ ಎನ್ನಲಾಗಿದೆ‌‌.ಸ್ಥಳಕ್ಕೆ ಅರಣ್ಯಾಧಿಕಾರಿಗಳಾದ ಮಡಿಕೇರಿ ಡಿಎಸ್‌ಎಫ್‌ ಹರ್ಷವರ್ಧನ ,ಕುಶಾಲನಗರ ಎಸಿ.ಎಫ್‌ ಗೋಪಾಲ್‌ ,ಆರ್‌ .ಎಫ್‌ .ಓ ರತನ್‌ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.ನಂತರ ಕಾಡಾನೆ ಕಳೇಬರದ ಮರಣೋತ್ತರ ಪರೀಕ್ಷೆ ನಂತರ ಆನೆಕಾಡು ಮೀಸಲು ಅರಣ್ಯಕ್ಕೆ ಸಾಗಿಸಲಾಯಿತು.