ಕೊಡ್ಲಿಪೇಟೆ:ಎಸ್.ಕೆ.ಎಸ್ ಕಲ್ಲು ಮಠ ಶಾಲೆಯಲ್ಲಿ ಗುರುಪೂರ್ಣಿಮೆ ಆಚರಣೆ

ಕೊಡ್ಲಿಪೇಟೆ:ಎಸ್.ಕೆ.ಎಸ್ ಕಲ್ಲು ಮಠ ಶಾಲೆಯಲ್ಲಿ ಗುರುಪೂರ್ಣಿಮೆ ಆಚರಣೆ

ಕೊಡ್ಲಿಪೇಟೆ: ಗುರುವಾರದಂದು ಕೊಡ್ಲಿಪೇಟೆಯ ಎಸ್.ಕೆ.ಎಸ್ ಕಲ್ಲು ಮಠ ಶಾಲೆಯಲ್ಲಿ ಗುರುಪೂರ್ಣಿಮೆಯನ್ನು ಆಚರಿಸಲಾಯಿತು. ಇದರ ಪ್ರಯುಕ್ತ ನೂತನವಾಗಿ ಶಾಲೆಗೆ ದಾಖಲಾದ ಎಲ್.ಕೆ.ಜಿ ಮಕ್ಕಳಿಗೆ ಅಕ್ಷರಭ್ಯಾಸ ಕಾರ್ಯಕ್ರಮವನ್ನು ನಡೆಸಲಾಯಿತು. ತಾಯಿ ಶಾರದಾಂಬೆಗೆ ಪೂಜೆ ಸಲ್ಲಿಸಿ, ಕಾರ್ಯಕ್ರಮದಲ್ಲಿ , ಸಂಸ್ಥೆಯ ಅಧ್ಯಕ್ಷರಾದ ಅಧ್ಯಕ್ಷರಾದ ಶ್ರೀ ಶ್ರೀ ಶ್ರೀ ಮಹಾಂತ ಸ್ವಾಮೀಜಿ ಯವರ ಆಶೀರ್ವಾದದೊಂದಿಗೆ ಮಕ್ಕಳಿಗೆ ಅಕ್ಷರಭ್ಯಾಸವನ್ನು ಮಾಡಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯೋಪಾಧ್ಯರಾದ ಅಭಿಲಾಶ್ ಹೆಚ್. ಎಂ. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು ಹಾಗೂ ಸಿಸಿ ಮಹಾಂತ ಸ್ವಾಮೀಜಿಯವರು ಮಕ್ಕಳ ಭವಿಷ್ಯ ಉಜ್ವಲವಾಗಲೆಂದು ಆಶೀರ್ವದಿಸಿದರು ಶಾಲೆಯ 7ನೇ ತರಗತಿ ವಿದ್ಯಾರ್ಥಿಗಳ ಅಮೃತ ಪ್ರಾರ್ಥನೆ ಮಾಡಿದರು ಶಿಕ್ಷಕಿ ಶ್ರೀಮತಿ ಶೀಲಾ. ಕೆ.ಜೆ ಅವರು ಕಾರ್ಯಕ್ರಮ ನಿರೂಪಣೆ ನಡೆಸಿಕೊಟ್ಟರು, ಶಿಕ್ಷಕಿ ಶ್ರೀಮತಿ ಸೌಭಾಗ್ಯ ರವರು ಸ್ವಾಗತ ಭಾಷಣ ಮತ್ತು ವಂದನಾರ್ಪಣೆಯನ್ನು ನೆರವೇರಿಸಿದರು. ಹಾಗೂ ಈ ಸಂದರ್ಭದಲ್ಲಿ ಶಾಲೆಯ ಭೋದಕ ಮತ್ತು ಬೋಧಕೀತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಿಸಿದ್ದರು.