ಕೂಡುಮಂಗಳೂರು: ಸಾಂಕ್ರಾಮಿಕ ರೋಗ ಹರಡುವ ಭೀತಿ ಪಂಚಾಯಿತಿಯಿಂದ ಕ್ರಮ

ಕೂಡುಮಂಗಳೂರು: ಸಾಂಕ್ರಾಮಿಕ ರೋಗ ಹರಡುವ ಭೀತಿ  ಪಂಚಾಯಿತಿಯಿಂದ ಕ್ರಮ

ಕುಶಾಲನಗರ: ಸಾಂಕ್ರಾಮಿಕ ರೋಗ ಹರಡುವ ಭೀತಿ ಹಿನ್ನಲೆ ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಸುಂದರನಗರದಲ್ಲಿ ಪಂಚಾಯಿತಿ ವತಿಯಿಂದ ಕ್ರಮ ಕೈಗೊಳ್ಳಲಾಯಿತು. ಸುಂದರನಗರದ ಅಂಗನವಾಡಿ,‌ ಸಮುದಾಯ ಭವನದ ಬಳಿ ಸೊಳ್ಳೆಗಳು ಬೀಡು ಬಿಟ್ಟ ಹಿನ್ನಲೆ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಯಿರುವ ಹಿನ್ನಲೆ ಮುನ್ನೆಚ್ಚರಿಕಾ ಕ್ರಮವಾಗಿ ಸುಂದರನಗರ ಅಂಗನವಾಡಿ, ಸಮುದಾಯ ಭವನ ಹಾಗೂ ಸೊಳ್ಳೆಗಳು ಉತ್ಪತ್ತಿಯಾಗುವ ಸ್ಥಳಗಳಲ್ಲಿ ಬ್ಲೀಚಿಂಗ್ ಸಿಂಪಡಿಸಲಾಯಿತು. 

ಬ್ಲೀಚಿಂಗ್ ಪೌಡರ್ ಸಿಂಪಡಸುವ ಸಂದರ್ಭ ಪೌರ ಕಾರ್ಮಿಕರೊಂದಿಗೆ ಕೈಜೋಡಿಸಿದ ವಾರ್ಡ್ ಸದಸ್ಯ ಕೆ.ಬಿ.ಶಂಶುದ್ಧೀನ್ ಅವರಿಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು. 

ಈ ಸಂದರ್ಭ ಮಾತನಾಡಿದ ವಾರ್ಡ್ ಸದಸ್ಯರಾದ ಕೆ.ಬಿ.ಶಂಶುದ್ಧೀನ್, ಮಳೆಗಾಲದ ಸಂದರ್ಭ ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಗ್ಯೂವಿನಂತಹ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳಿರುವ ಹಿನ್ನಲೆ ಅಂಗಮವಾಡಿ, ಸಮುದಾಯ ಭವನ ಹಾಗೂ ಇನ್ನಿತರ ಕಡೆಗಳಲ್ಲಿ ಬ್ಲೀಚಿಂಗ್ ಪೌಡರ್ ಹಾಕಲಾಗಿದೆ. ಸಾರ್ವಜನಿಕರು ತಮ್ಮ ಆರೋಗ್ಯ ದೃಷ್ಟಿಯಿಂದ ತಮ್ಮ ಮನೆಯ ಸುತ್ತಮುತ್ತ ಸ್ವಚ್ಚತೆ ಕಾಪಾಡಬೇಕು ಎಂದು ಅವರು ಮನವಿ ಮಾಡಿಕೊಂಡರು.  ಈ ಸಂದರ್ಭ ನೀರು ಗಂಟಿ ಕುಮಾರ್, ಪೌರಕಾರ್ಮಿಕರಾದ ನಾಗರಾಜ್, ಪುಟ್ಟಮ್ಮ ಹಾಗೂ ಗ್ರಾಮಸ್ಥರು ಇದ್ದರು.