ಕುಶಾಲನಗರ: ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಜಾಮಿಯಾ ಮಸೀದಿ ವತಿಯಿಂದ ಪ್ರತಿಭಟನೆ

ಕುಶಾಲನಗರ : ಕೇಂದ್ರ ಸರಕಾರದ ಜಾರಿಗೆ ತಂದಿರುವ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋಡ್ ಮಾರ್ಗದರ್ಶನದಂತೆ ಕುಶಾಲನಗರ ಜಾಮಿಯಾ ಮಸೀದಿ ವತಿಯಿಂದ ಶುಕ್ರವಾರದ ನಮಾಝ್ ಬಳಿಕ ಮಸೀದಿಯಿಂದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದ ವರೆಗೆ ಮಾನವ ಸರಪಳಿ ರಚಿಸಿ ಶಾಂತಿಯುತ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಜಾಮಿಯ ಮಸೀದಿ ಧರ್ಮಗುರು ಮೌಲಾನ ಮುಫ್ತಿ ರಶೀದ್ ಅಹಮದ್ ಸಾಬ್, ಅಧ್ಯಕ್ಷರಾದ ಮೆಹ್ತಾ ಮಹಮದ್, ಕಾರ್ಯದರ್ಶಿ ರಫಿಕ್ ಅಹಮದ್ ಮತ್ತು ಆಡಳಿತ ಮಂಡಳಿ ಸದಸ್ಯರು, ಕುಶಾಲನಗರದ ಮುಸ್ಲಿ ಭಾಂದವರು ಭಾಗವಹಿಸಿದ್ದರು.