ಮಕ್ಕಳ ಆಸಕ್ತಿಯನ್ನು ಪೋಷಕರು ಗಮನಿಸುವಂತಾಗಬೇಕು: ಉಪನ್ಯಾಸಕ ಸತ್ಯಜಿತ್ : ವಿರಾಜಪೇಟೆ ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳಿಗಾಗಿ ಶಾಲಾ ಶಿಕ್ಷಣದ ನಂತರದ ಅವಕಾಶದ ಕುರಿತು ಕಾರ್ಯಾಗಾರ

ಮಕ್ಕಳ ಆಸಕ್ತಿಯನ್ನು ಪೋಷಕರು ಗಮನಿಸುವಂತಾಗಬೇಕು: ಉಪನ್ಯಾಸಕ ಸತ್ಯಜಿತ್ :  ವಿರಾಜಪೇಟೆ ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ  ಪೋಷಕರು ಮತ್ತು ವಿದ್ಯಾರ್ಥಿಗಳಿಗಾಗಿ ಶಾಲಾ ಶಿಕ್ಷಣದ ನಂತರದ ಅವಕಾಶದ ಕುರಿತು ಕಾರ್ಯಾಗಾರ

ವಿರಾಜಪೇಟೆ : ಶಾಲೆಯ ಅಂತಿಮ ಹಂತದಲ್ಲಿರುವ ವಿದ್ಯಾರ್ಥಿಗಳು ತಮ್ಮ ಆಸಕ್ತಿ ಕುರಿತು ಅರಿಯಬೇಕು ಮತ್ತು ಮುಂದಿನ ಆಯ್ಕೆಗೆ ಸನ್ನದರಾಗಬೇಕು ಎಂದು ಪುತ್ತೂರು ಅಂಬಿಕಾ ಕಾಲೇಜಿನ ಭೌತಶಾಸ್ತೃ ವಿಭಾಗದ ಉಪನ್ಯಾಸಕರಾದ ಸತ್ಯಜಿತ್ ಕೆ.ವೈ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರಗತಿ ಆಂಗ್ಲ ಮಾಧ್ಯಮ ಶಾಲೆ ವಿರಾಜಪೇಟೆ ವತಿಯಿಂದ ಶಾಲೆಯ ಸಭಾಂಗಣದಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳಿಗಾಗಿ ಶಾಲಾ ಶಿಕ್ಷಣದ ನಂತರದ ಅವಕಾಶದ ಕುರಿತು ಒಂದು ದಿನದ ಕಾರ್ಯಾಗಾರ ಏರ್ಪಡಿಸಲಾಗಿತ್ತು.

 ಕಾರ್ಯಾಗಾರವನ್ನು ದೀಪ ಬೆಳಗಿಸಿ ಉಪನ್ಯಾಸದಲ್ಲಿ ಮಾತನಾಡಿದ ಸತ್ಯಜಿತ್ ಅವರು ಶಾಲಾ ದಿನಗಳಲ್ಲಿ ವಿಷಯಗಳನು ಅರಿತುಕೊಳ್ಳುವ ತವಕದಲ್ಲಿ ವಿದ್ಯಾರ್ಥಿಗಳು ಕೇಂದ್ರಿಕೃತವಾಗಿರುತ್ತದೆ. ಇಲ್ಲಿ ಪೋಷಕರು ಮಕ್ಕಳ ಆಸಕ್ತಿಯ ಬಗ್ಗೆ ಹೆಚ್ಚು ಗಮನಹರಿಸುವಂತಾಗಬೇಕು. ಹಲವು ವಿದ್ಯಾರ್ಥಿಗಳಿಗೆ ಶಾಲಾ ವಿದ್ಯಾಭ್ಯಾಸ ಮುಗಿದ ಬಳಿಕ ಕಾಲೇಜು ವಿಷಯಗಳ ಬಗ್ಗೆ ಗೊಂದಲಗಳು ಮೂಡುವುದು ಸಹಜ. ಪೋಷಕರ ಒತ್ತಡ, ಸಮಾಜದ ಗೌರವಕ್ಕೆ, ಕಾಲೇಜು ಆಯ್ಕೆ ಶಾಲಾ ಸ್ನೇಹಿತರು ಆಯ್ಕೆ ಮಾಡುವ ಕಾಲೇಜಿನಲ್ಲೇ ವಿದ್ಯಾಭ್ಯಾಸ ಮುಂದುವೆರೆಸುವ ಆಸೆ ಹೀಗೆ ಹಲವಾರು ಸಮಸ್ಯೆಗಳು ವಿದ್ಯಾರ್ಥಿಗಳ ಕಣ್ಣ ಮುಂದೆ ಬಂದು ಸಾಗುತ್ತದೆ. ಆದರೆ ವಿದ್ಯಾರ್ಥಿಗಳು ಸ್ಥಿರ ಮನಸ್ಸನಿಂದ ಬಾಹ್ಯ ಒತ್ತಡಕ್ಕೆ ಮಣಿಯದೆ ವಿಷಯ ಆಯ್ಕೆಗೆ ಮುಂದಾಗಬೇಕು. ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಶಕ್ತರಾಗಿರಬೇಕು. ಹಿರಿಯರಿಂದ ಶೈಕ್ಷಣಿಕ ಮಾರ್ಗದರ್ಶನ ಮುಖ್ಯ ಎಂದು ಹೇಳಿದರು.

ಪ್ರಗತಿ ಶಾಲೆಯ ಆಡಳಿತಾಧಿಕಾರಿಗಳಾದ ಮಾದಂಡ ತಿಮ್ಮಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಇಂತಹ ಕಾರ್ಯಾಗಾರಗಳು ಎಲ್ಲಾ ವರ್ಷಗಳು ನಡೆಯುವಂತಾಗಬೇಕು. ವಿದ್ಯಾರ್ಥಿಗಳು ಕಲಿಕೆಗೆ ಮಾತ್ರ ಸಿಮಿತವಾಗದೇ ಭವಿಷ್ಯ ನಿರ್ಮಾಣ ಮಾಡುವ ವಿಷಯಗಳಿಗೆ ಒತ್ತು ನೀಡುವಂತಾಗಬೇಕು. ಒತ್ತಡದಿಂದ ಯಾವುದನ್ನು ಗಳಿಸಲು ಅಸಾಧ್ಯ ಆದರೆ ತಿಳಿವಳಿಕೆ ಆಸಕ್ತಿ ಮತ್ತು ಕಲಿಯುವ ವಿಷಯಗಳ ಬಗ್ಗೆ ಆಳವಾದ ಅಧ್ಯಯನ ಮಾಡಿ ಕಲಿತಲ್ಲಿ ಮಾತ್ರ ಗುರಿ ಹೊಂದಲು ಸಾದ್ಯ ಎಂದು ಹೇಳಿದರು.

 ಕಾರ್ಯಕ್ರಮದ ವೇದಿಕೆಯಲ್ಲಿ ಪುತ್ತೂರು ಅಂಬಿಕ ಕಾಲೇಜಿನ ಪ್ರಾಂಶುಪಾಲರಾದ ಪ್ರದೀಪ್, ಪ್ರಗತಿ ಶಾಲೆಯ ವ್ಯವಸ್ಥಾಪಕಿಯಾದ ಸುಷ್ಮಾ ತಿಮ್ಮಯ್ಯ, ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿಯಾದ ಪ್ರತಿಮಾ ಅವರು ಉಪಸ್ಥಿತರಿದ್ದರು. ಪ್ರಗತಿ ಶಾಲೆಯ ವಿದ್ಯಾರ್ಥಿ ಕುಮಾರಿ ದಿಯಾ, ಮೊಹಮ್ಮದ್ ಹರ್ಷ್ ಮತ್ತು ಶೈಮ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಶೈಮಾ ಸರ್ವರನ್ನೂ ಸ್ವಾಗತಿಸಿ ಮೊಹಮ್ಮದ್ ಹರ್ಷ್ ವಂದಿಸಿದರು. ಕಾರ್ಯಾಗಾರದಲ್ಲಿ ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು, ಸಿಬ್ಬಂದಿಗಳು ಹಾಜರಿದ್ದರು.