ಸೋಮವಾರಪೇಟೆ:ಭಾರತೀಯ ಸೇನೆಯಲ್ಲಿ 37ವರ್ಷಗಳ ಕಾಲ ಸೇವೆ ಸಲ್ಲಿಸಿ,ನಿವೃತ್ತಿ ಪಡೆದ ಯೋಧನಿಗೆ ಅದ್ಧೂರಿ ಸ್ವಾಗತ

ಸೋಮವಾರಪೇಟೆ :-ಆ ಊರಲ್ಲಿ ಸಂಭ್ರಮ,ಸಡಗರ ಅಲ್ಲಿ ಒಂದು ವಿಶೇಷ ಕಾರ್ಯಕ್ರಮ ನಮ್ಮೂರ ಮಗ ರಾಷ್ಟ್ರ ರಕ್ಷಣೆಯ 37 ವರ್ಷಗಳ ಸುದೀರ್ಘ ಸೇವೆಯಲ್ಲಿ ನಿವೃತ್ತಿ ಪಡೆದು ಸ್ವಗ್ರಾಮಕ್ಕೆ ಆಗಮಿಸುತ್ತಿರುವ ಹೆಮ್ಮೆ ಊರವರ ಮುಖದಲ್ಲಿ ಕಾಣುತಿತ್ತು. ಇಂದು ತಾಲೂಕಿನ ಆಲೂರುಸಿದ್ದಾಪುರ ಸಮೀಪದ ಮೈಲಾತ್ಪುರ ಗ್ರಾಮದಲ್ಲಿ ಕಂಡುಬಂದ ದೃಶ್ಯ. ಇದೇ ಗ್ರಾಮದಲ್ಲಿ ಜನಿಸಿ ಕೇಂದ್ರೀಯ ಮೀಸಲು ಪಡೆಯಲ್ಲಿ ಮೂಲಕ ರಾಷ್ಟ್ರ ರಕ್ಷಣೆಗೆ ಸೇರಿ ದೇಶದ ಬಹುತೇಕ ರಾಜ್ಯಗಳಲ್ಲಿ ಸುದೀರ್ಘ 37ವರ್ಷಗಳ ಸೇವೆಯ ನಂತರ ವಯೋಸಹಜ ನಿವೃತ್ತಿ ಪಡೆದು ಸ್ವಗ್ರಾಮಕ್ಕೆ ಆಗಮಿಸಿದ ಮಂಜುನಾಥ್ ರವರಿಗೆ ಗ್ರಾಮಸ್ಥರು ಹಾಗೂ ಕುಟುಂಬಸ್ಥರಿಂದ ಅಭೂತಪೂರ್ವ ಸ್ವಾಗತ,ಅಭಿನಂದನೆ,ಸನ್ಮಾನ ಕಾರ್ಯಕ್ರಮ.ಇವರೊಂದಿಗೆ ಇವರ ಅಕ್ಕ ಪಕ್ಕದ ಗ್ರಾಮದ ನಿವೃತ್ತ ಯೋಧರಿಗೂ ಸನ್ಮಾನಿಸಿದ ಗೌರವ ಪೂರ್ವಕ ಅರ್ಥ ಪೂರ್ಣ ಕಾರ್ಯಕ್ರಮ ಜನಸಾಮಾನ್ಯರಲ್ಲಿ ಈ ದೇಶದ ಸೈನಿಕರಬಗ್ಗೆ ಇರುವ ಗೌರವ ಹಾಗೂ ಪೂಜನೀಯ ಭಾವನೆಗೆ ಸಾಕ್ಷಿಯಾಯಿತು.
ಈ ಸಂದರ್ಭ ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಯೋಧ ಮಂಜುನಾಥ್ ರಾಷ್ಟ್ರ ರಕ್ಷಣೆಯ ಸೇವೆ ಎಲ್ಲಾರಿಗೂ ಸಿಗುವಂತಹುದಲ್ಲಾ ಆದರೆ ನನಗೆ ಅಂತಹ ಅವಕಾಶ ಸಿಕ್ಕಿತ್ತು ಭಾರತಾಂಬೆಯ ಸೇವೆ ಮಾಡಿದ ಸಾರ್ಥಕತೆ ನನಗಿದೆ ಅದು ಹೆಮ್ಮೆ ಎಂದರು.37 ವರ್ಷಗಳಲ್ಲಿ ಹಲವು ಭಾರಿ ಪ್ರಾಣ ಕಳೆದು ಕೊಳ್ಳಬೇಕಾದಂತಹ ಪರಿಸ್ಥಿತಿ ಎದುರಾಗಿತ್ತು ಆದರೆ ನಿಮ್ಮೆಲ್ಲರ ಹಾರೈಕೆಯಿಂದ ಬದುಕಿಬರುವಂತಾಯಿತು ಆದರೆ ನಮ್ಮ ಕಣ್ಣ ಮುಂದೆಯೇ ನಮ್ಮ ಹಲವು ಸಹೋದ್ಯೋಗಿಗಳು ಜೀವತೆತ್ತಿರುವುದು ನನ್ನ ವೃತ್ತಿಬದುಕಿನ ಅತ್ಯಂತ ದುಃಖದ ಕ್ಷಣಗಳು ಎಂದು ಭಾವುಕರಾಗಿ ನುಡಿದರು.ತಮ್ಮ ಬಾಲ್ಯ ಹಾಗೂ ವೃತ್ತಿ ಬದುಕಿನ ಸಿಹಿ,ಕಹಿ ಘಟನೆಗಳನ್ನು ಮೆಲುಕು ಹಾಕಿದರು.
ಕಾರ್ಯಕ್ರಮ ಸಾನೀಧ್ಯ ವಹಿಸಿದ್ದ ತಪೋಕ್ಷೇತ್ರ ಮನೆಹಳ್ಳಿ ಮಠದ ಶ್ರೀ.ಮಹಾಂತ ಶಿವಲಿಂಗ ಸ್ವಾಮೀಜಿ ಮಾತನಾಡಿ ಈ ದೇಶದ ಸೈನಿಕರು ರಕ್ಷಣೆಯಲ್ಲಿ ನಿಂತಿದ್ದರಿಂದಲೇ ನಾವುಗಳು ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ ಆದ್ದರಿಂದ ನಾವು ಸೈನಿಕರನ್ನು ಗೌರವ ಭಾವನೆಯಿಂದ ಕಾಣಬೇಕು ಎಂದರು, ಇಂದು ನಮ್ಮ ರಕ್ಷಣಾ ವ್ಯವಸ್ಥೆ ಇಷ್ಟೆಲ್ಲಾ ಇದ್ದರೂ ಸಹ ನೆರೆ ರಾಷ್ಟ್ರಗಳ ಹಾವಳಿ,ದೇಶದೊಳಗೆ ಉಗ್ರಗಾಮಿಗಳು,ನಕ್ಸಲರು ಮುಂತಾದ ದೇಶದ್ರೋಹ ಕಾರ್ಯಗಳು ನಡೆಯುತ್ತಿವೆ ಆದರೆ ಸೈಕರ್ ಇಲ್ಲವಾಗಿದ್ದಾರೆ ಪರಿಸ್ಥಿತಿ ಊಹಿಸಲು ಸಾದ್ಯವಿರುತಿರಲಿಲ್ಲವೆಂದರು.ಮೈಲಾತ್ಪುರ ಸಣ್ಣೆಗೌಡರ ಕುಟುಂಬ ರಾಷ್ಟ್ರರಕ್ಷಣೆ ಮಂಜುನಾಥ್ ಹಾಗೂ ಧರ್ಮದ ರಕ್ಷಣೆಗೆ ಶಿಡಿಗಳಲೆ ಮಠದ ಸ್ವಾಮೀಜಿಯಂತಹ ಎರೆಡು ಜನ ಸೈನಿಕರನ್ನು ಸಮಾಜಕ್ಕೆ ನೀಡಿದ್ದಾರೆ.ದೇಶದ ಸೈನಿಕರಬಗ್ಗೆ ಹಾಗೂ ಅನ್ನದಾತ ರೈತರ ಬಗ್ಗೆ ನಾವು ಗೌರವ ಭಾವನೆಯಿಂದ ಕಾಣಬೇಕೆಂದರು.
ಶಿಡಿಗಳಲೆ ಮಠದ ಶ್ರೀ.ಇಮ್ಮಡಿ ಶಿವಲಿಂಗ ಸ್ವಾಮೀಜಿ ಮಾತನಾಡಿ ಅನ್ನದಾತ ರೈತರ ಹಾಗೂ ರಾಷ್ಟ್ರ ರಕ್ಷಣೆದಾತ ಸೈನಿಕರು ಒಂದೇ ನಾಣ್ಯದ ಎರೆಡು ಮುಖವಿದ್ದಂತೆ ಎಂದರು. ಇಬ್ಬರಿಗೂ ಯಾವುದೇ ಚ್ಯುತಿ ಬಾರದಂತೆ ಗೌರವ ಸಲ್ಲಬೇಕೆಂದರು.ಇದೇ ಸಂದರ್ಭ ನಿವೃತ್ತ ಸೈನಿಕರುಗಳಾದ ಮಂಜುನಾಥ್ ಸೇರಿದಂತೆ ಅಂಕನಹಳ್ಳಿ ಮಹೇಶ್,ಸೋಮಣ್ಣ,ಶೆಟ್ಟಿಹಳ್ಳಿ ಜಗದೀಶ್ ಹಾಗೂ ನಿವೃತ್ತ ಶಿಕ್ಷರಾದ ಬಡುಬನಹಳ್ಳಿಯ ಷಣ್ಮುಕಯ್ಯ ನವರುಗಳನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಆಯೋಜಕರಾದ ಪರಮೇಶ್ ಅಧ್ಯಕ್ಷತೆ ವಹಿಸಿದ್ದರು.ಪ್ರಮುಖರಾದ ಬಸಪ್ಪ,ಶಿಕ್ಷಕರುಗಳಾದ ಕುಮಾರ್ ಹಾಗೂ ಸುರೇಶ್ ಉಪಸ್ತಿತರಿದ್ದರು.