ರಸ್ತೆಯಲ್ಲಿ ಮಗಿಚಿ ಬಿದ್ದ ಮರ ಸಾಗಾಟದ ಲಾರಿ: ಚಾಲಕ ಪ್ರಾಣ ಪಾಯದಿಂದ ಪಾರು

ರಸ್ತೆಯಲ್ಲಿ ಮಗಿಚಿ ಬಿದ್ದ ಮರ ಸಾಗಾಟದ ಲಾರಿ: ಚಾಲಕ  ಪ್ರಾಣ ಪಾಯದಿಂದ ಪಾರು

ಸಿದ್ದಾಪುರ:-ಮರ ಸಾಗಾಟ ಮಾಡುತ್ತಿದ್ದ ಲಾರಿಯೊಂದು ಸೇತುವೆ ಕಾಮಗಾರಿ ನಡೆಯುತ್ತಿದ್ದ ರಸ್ತೆಯಲ್ಲಿ ಸಿಲುಕಿ ಮಗುಚಿ ಬಿದ್ದ ಘಟನೆ ಸಿದ್ದಾಪುರ ಸಮೀಪದ ಅಂಬೇಡ್ಕರ್ ನಗರ ಬಳಿ ವಿರಾಜಪೇಟೆ- ಸಿದ್ದಾಪುರ ಮಾರ್ಗದ ಮುಖ್ಯ ರಸ್ತೆಯಲ್ಲಿ ನಡೆದಿದೆ. 

ಮರದ ದಿಮ್ಮಿಗಳನ್ನು ತುಂಬಿ ವಿರಾಜಪೇಟೆ ರಸ್ತೆಯಿಂದ ಸಿದ್ದಾಪುರ ಮಾರ್ಗಕ್ಕೆ ತೆರಳುತ್ತಿದ್ದ ವೇಳೆ ಅಂಬೇಡ್ಕರ್ ನಗರದ ಬಳಿ ಸೇತುವೆ ನಿರ್ಮಾಣದ ಕಾಮಗಾರಿ ನಡೆಯುತ್ತಿದ್ದ ರಸ್ತೆಯ ಗುಂಡಿಯಲ್ಲಿ ಸಿಲುಕಿ ಲಾರಿ ಮಗುಚಿ ಬಿದ್ದಿದೆ ಲಾರಿಯಲ್ಲಿದ್ದ ಚಾಲಕ ಹಾಗೂ ಕ್ಲೀನರ್ ಪ್ರಾಣ ಪಾಯದಿಂದ ಪಾರಾಗಿದ್ದಾರೆ.

ಸಿದ್ದಾಪುರ- ವಿರಾಜಪೇಟೆ ಮಾರ್ಗದ ವಾಹನ ಸಂಚಾರಕ್ಕೆ ತೊಡಕುಂಟಾದ ಹಿನ್ನೆಲೆ  ತಕ್ಷಣ ರಾತ್ರಿಯೇ ಮರದ ದಿಮ್ಮಿಗಳನ್ನು ಸ್ಥಳಾಂತರ ಮಾಡಲಾಗಿತ್ತು.ಬೆಳಿಗ್ಗೆ ಜೆಸಿಬಿ ಕ್ರೈನನ್ನು ಬಳಸಿ ಲಾರಿಯನ್ನ ಮೇಲತ್ತಿ ಸುಗಮ ಸಂಚಾರ ವ್ಯವಸ್ಥೆ ಮಾಡಲಾಯಿತು.ಸಿದ್ದಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕಳೆದ ಏಳು ತಿಂಗಳನಿಂದ ಸಿದ್ದಾಪುರ ಮುಖ್ಯ ರಸ್ತೆಯ ಸೇತುವೆ ಹಾಗೂ ರಸ್ತೆ ಕಾಮಗಾರಿ ವಿಳಂಬವಾಗುತ್ತಿರುವ ಹಿನ್ನೆಲೆ ಹಲವು ವಾಹನಗಳು ಅಪಘಾತದಲ್ಲಿ ಹಾನಿಯಾಗಿದೆ ಕೇರಳ, ಹಾಸನ, ಕೊಡಗು ಮಾರ್ಗದ ಮುಖ್ಯರಸ್ತೆಯಾಗಿದ್ದು ರಸ್ತೆ ಕಾಮಗಾರಿ ವಿಳಂಬ ದಿಂದ ವಾಹನ ಸಂಚಾರಕ್ಕೆ ತೊಡಕು ಉಂಟಾಗುತ್ತಿದೆ.ವಾಹನ ಅಪಘಾತಗಳು ಹೆಚ್ಚಾಗುತ್ತಿದ್ದು ಜನಪ್ರತಿನಿಧಿಗಳು, ಅಧಿಕಾರಿಗಳು ರಸ್ತೆ ಅಭಿವೃದ್ಧಿ ಕಾಮಗಾರಿ ಬಗ್ಗೆ ನಿರ್ಲಕ್ಷ ವಹಿಸುತ್ತಿರುವ ಪರಿಣಾಮವೇ ಗುತ್ತಿಗೆದಾರರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.