ಅಬುಧಾಬಿ: ಮ್ಯಾರಥಾನ್ ನಲ್ಲಿ ಕೊಡಗಿಗೆ ಕೀರ್ತಿ ತಂದ ಬಾಲೆ :ರಿಮ್ಸಾ ನಫೀಸಾ ಕುಪ್ಪೆಂದಾರೆಗೆ ಅಬುಧಾಬಿ ಮೂರು ಮ್ಯಾರಥಾನ್‌ಗಳಲ್ಲಿ ಯಶಸ್ಸು

ಅಬುಧಾಬಿ: ಗಲ್ಫ್ ಮಲ್ಟಿ ಸ್ಪೋರ್ಟ್ಸ್ ಇತ್ತೀಚೆಗೆ ರಾಜಧಾನಿಯಲ್ಲಿ ಸತತ ಮೂರು 5 ಕಿಮೀ ಮ್ಯಾರಥಾನ್ ಸ್ಪರ್ಧೆಗಳನ್ನು ಆಯೋಜಿಸಿದ್ದರು. ವಿವಿಧ ರಾಷ್ಟ್ರಗಳ 250 ಕ್ಕೂ ಹೆಚ್ಚು ಕ್ರೀಡಾಪಟುಗಳಿಗೆ ಅವಕಾಶ ನೀಡಲಾಗಿತ್ತು.ಮ್ಯಾರಥಾನ್ ನಲ್ಲಿ ಭಾಗವಹಿಸಿದ್ದ ಉದಯೋನ್ಮುಖ ಕ್ರೀಡಾಪಟುಗಳಲ್ಲಿ ಕೊಡಗು ಜಿಲ್ಲೆಯ ಮಡಿಕೇರಿ ಯುವ ಪ್ರತಿಭೆ ಭಾರತದ ರಿಮ್ಸಾ ನಫೀಸ ಕುಪ್ಪೆಂದಾರೆ ಕೂಡ ಒಬ್ಬರು.ಅವರು 15 ವರ್ಷದೊಳಗಿನ ಮಹಿಳಾ ವಿಭಾಗದಲ್ಲಿ ಅಸಾಧಾರಣ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ.
ರಿಮ್ಸಾ ಪ್ರಸ್ತುತ ಅಕ್ವಾ ನೇಷನ್ ದುಬೈನಲ್ಲಿ ಈಜು ತರಬೇತಿ ಪಡೆಯುತ್ತಿದ್ದಾರೆ.ಮತ್ತು ಇತ್ತೀಚೆಗೆ ಅವರ ಪೋಷಕರಾದ ಮಡಿಕೇರಿ ನಗರದ ಕುಪ್ಪೆಂದಾರೆ ಸುಲೇಮಾನ್ ಮತ್ತು ಜುಲ್ಫಿಯಾ ನಜೀರ್ ಅವರ ಮಾರ್ಗದರ್ಶನ ಮತ್ತು ಬೆಂಬಲದೊಂದಿಗೆ ಸ್ಪರ್ಧಾತ್ಮಕ ಮ್ಯಾರಥಾನ್ ಓಟದಲ್ಲಿ ತೊಡಗಿದ್ದಾರೆ.
ರನ್ ಬಿಯಾಂಡ್ ದಿ ಸನ್ಸೆಟ್ 17ನೇ ಮೇ 2025:
ಪ್ರಥಮ: ಡಯಾನಾ ಇಬೆಜಿಯಾಕೊ (ಕೆನಡಾ)
ದ್ವಿತೀಯ: ರಿಮ್ಸಾ ನಫೀಸ (ಭಾರತ)
ಫಾರ್ಮುಲಾ ರನ್ ರೇಸ್ - 15ನೇ ಜೂನ್ 2025:ಫೆರಾರಿ ವರ್ಲ್ಡ್, ಅಬುಧಾಬಿಯಿಂದ ಆಯೋಜಿಸಲಾಗಿತ್ತು.
3 ನೇ ಸ್ಥಾನ - ರಿಮ್ಸಾ ನಫೀಸ ಕುಪ್ಪೆಂದರೆ (ಭಾರತ)
1ನೇ ಸ್ಥಾನ:ಅನಾ ಸ್ಟೀನ್ (ಬ್ರೆಜಿಲ್)
2 ನೇ ಸ್ಥಾನ : ನಿಕಾ ಸ್ವಗುಸಾ (ಕ್ರೊಯೇಷಿಯಾ)
ರೀಮ್ ಮಾಲ್ ರನ್ 2025 21ನೇ ಜೂನ್ 2025 ಅಬುಧಾಬಿ:
3 ನೇ ಸ್ಥಾನ - ರಿಮ್ಶಾ ನಫೀಸಾ (ಭಾರತ)
ಪ್ರ
ಥಮ: ನಿಕಾ ಸ್ವಾಗುಸಾ (ಕ್ರೊಯೇಷಿಯಾ)
ದ್ವಿತೀಯ: ಶ್ರೀಮತಿ ಕ್ವಿನ್ ಬ್ರೌನ್ (ಐರ್ಲೆಂಡ್)