ಕಲ್ಲುಬಾಣೆ: ನೂತನ ರಸ್ತೆ ಉದ್ಘಾಟನೆ

ವಿರಾಜಪೇಟೆ :ವಿಧಾನಸಭಾ ಕ್ಷೇತ್ರದ, ವಿರಾಜಪೇಟೆ ತಾಲೂಕು ಕಲ್ಲುಬಾಣೆ ಭಾಗದಲ್ಲಿ ಇಂದು ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣನವರು ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.
ಸುಮಾರು₹ 0.35 ಲಕ್ಷ ವೆಚ್ಚದಲ್ಲಿ ಕಲ್ಲುಬಾಣೆ ಮುಖ್ಯ ರಸ್ತೆ ಮತ್ತು ವಾನಂಡ ಮನೆ ರಸ್ತೆಯಿಂದ ಇ.ಎಂ.ಎಸ್ ಅಲಿ ಅವರ ಮನೆಯ ಕಡೆಗೆ ಹೋಗುವ ರಸ್ತೆ ಉದ್ಘಾಟನೆಯನ್ನು ಇಂದು ನೆರವೇರಿಸಿದರು.
ರಸ್ತೆ ಉದ್ಘಾಟಿಸಿದ ಬಳಿಕ ಬಡಾವಣೆಯ ಎಲ್ಲಾ ಜನರಿಗೆ ಮಾನ್ಯ ಶಾಸಕರು ಶುಭ ಕೋರಿದರು. ಸ್ಥಳೀಯರು ಮಾತನಾಡಿ ತಮ್ಮ ಬಹುಕಾಲದ ಕನಸು ಇಂದು ನನಸಾಗಿದ್ದು ಮಾನ್ಯ ಶಾಸಕರು ಇದಕ್ಕೆ ಪೂರಕವಾಗಿ ಸ್ಪಂದಿಸಿ ನೆರವೇರಿಸಿ ಕೊಟ್ಟಿದ್ದಕ್ಕೆ ತಾವುಗಳೆಲ್ಲರೂ ಚಿರಋಣಿ ಎಂದು ಹೇಳಿದರು. ಮಾನ್ಯ ಶಾಸಕರಿಗೆ ವಿಶೇಷ ರೀತಿಯಲ್ಲಿ ಸನ್ಮಾನಿಸುವುದರ ಮೂಲಕ ಸ್ಥಳೀಯ ಜನರು ತಮ್ಮ ಕೃತಜ್ಞತೆಯನ್ನು ಮಾನ್ಯ ಶಾಸಕರಿಗೆ ಅರ್ಪಿಸಿದರು.
ಈ ಸಂದರ್ಭದಲ್ಲಿ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಂಜಿ ಪೂಣ್ಣಚ್ಚ, ತಾಲೂಕು ಬಗರ್ ಹುಕುಂ ಅಧ್ಯಕ್ಷರಾದ ಸಲಾಂ,ಜಿಲ್ಲಾ ಅಲ್ಪಸಂಖ್ಯಾತರ ಅಧ್ಯಕ್ಷರಾದ ಹನೀಫ್,ವಿರಾಜಪೇಟೆ ತಾಲೂಕು ಕೆಡಿಪಿ ಸದಸ್ಯರಾದ ರಫೀಕ್, ಪುರಸಭಾ ಸದಸ್ಯರಾದ ರಾಫಿ,ವಲಯ ಅಧ್ಯಕ್ಷರು, ಪಕ್ಷದ ಪ್ರಮುಖರು ಹಾಗೂ ಸ್ಥಳೀಯರು ಉಪಸಿತರಿದ್ದರು.