ಕುಶಾಲನಗರ:ದಾರುಲ್ ಉಲೂಮ್ ಮದರಸದಲ್ಲಿ ವಿದ್ಯಾರ್ಥಿಗಳಿಂದ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಕಾರ್ಯಕ್ರಮ
ಕುಶಾಲನಗರ: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡಿನ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಮಸ್ತದ ಮದರಸಗಳಲ್ಲಿ ಕೇಂದ್ರದ ನಿರ್ದೇಶನದ ಮೇರೆಗೆ ನಡೆಯುತ್ತಿರುವ ಮಾದಕ ವಸ್ತುಗಳ ಉಪಯೋಗದ ವಿರುದ್ಧ ಜನಜಾಗೃತಿ ಹಾಗೂ ಪ್ರತಿಜ್ಞಾ ವಿಧಿ ಕಾರ್ಯಕ್ರಮವು ಕುಶಾಲನಗರ ದಾರುಲ್ ಉಲೂಮ್ ಮದರಸದಲ್ಲಿ ನಡೆಯಿತು. ಮಾದಕ ವಸ್ತುಗಳು ಮಾರಣಾಂತಿಕವಾಗಿದ್ದು, ಅದರ ವಿರುದ್ದ ನಿರಂತರವಾಗಿ ಅಭಿಯಾನ ಹಾಗೂ ಜಾಗೃತಿ ಮೂಡಿಸಲು ವಿದ್ಯಾರ್ಥಿಗಳು ಪ್ರತಿಜ್ಞೆಯನ್ನು ಸ್ವೀಕರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಬಿ.ವಿ ಅಧ್ಯಕ್ಷರಾದ ಅಧ್ಯಕ್ಷರಾದ ಶಕೀರ್ ಫೈಝು ವಹಿಸಿದ್ದರು. ಪ್ರಾಂಶುಪಾಲರಾದ ಎಂ ತಮ್ಲೀಖ್ ದಾರಿಮಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಖತೀಬರಾದ ಶಾಫಿ ಫೈಝಿ ಇರ್ಫಾನಿ ಮಾದಕ ವ್ಯಸನಗಳನ್ನು ತಡೆಯಲು ನಾವು ಪ್ರತಿಜ್ಞಾ ಬದ್ಧರಾಗಿದ್ದೇವೆ ಎಂದರು. ಸಂಚಾಲಕರಾದ ಯಾಸೀನ್ ಫೈಝಿ ಸಿದ್ದಾಪುರ ಪ್ರತಿಜ್ಞೆಯನ್ನು ಭೋದಿಸಿದರು.
ಮಾದಕ ಮುಕ್ತ ಸಮಾಜವನ್ನು ನಿರ್ಮಿಸಲು ವಿದ್ಯಾರ್ಥಿಗಳಿಂದ ಸಹಿ ಶೇಖರಣಾ ನಡೆಸಿ ಮುಖ್ಯಮಂತ್ರಿಗೆ ತಲುಪಿಸಲು ತೀರ್ಮಾನಿಸಲಾಯಿತು. ಮಹಲ್ ಕಾರ್ಯದರ್ಶಿ ಅಬ್ದುಲ್ ಮಜೀದ್, ಸಹ ಕಾರ್ಯದರ್ಶಿ ಮುಹಮ್ಮದಲಿ,ಯೂತ್ ಕಾರ್ಯದರ್ಶಿ ನೂರುಲ್ಲಾ ಮತ್ತು ಅಬ್ದುಲ್ ಜಲೀಲ್ ಭಾಗವಹಿಸಿದ್ದರು. ಅಧ್ಯಾಪಕರಾದ ಉನೈಸ್ ಫೈಝಿ, ನಫೀರ್ ಮುಸ್ಲಿಯಾರ್, ರಾಝಿಕ್ ರಹ್ಮಾನಿ, ಜಾಬಿರ್ ಅಝ್ಹರಿ ,ಮತ್ತು ಅಶ್ರಫ್ ಅಝ್ಹರಿ, ಹಂಸ ಮುಸ್ಲಿಯಾರ್ ಹಾಗೂ ಮುಶ್ತಾಖ್ ದಾರಿಮಿ,ಎಸ್.ಕೆ.ಎಸ್.ಬಿ.ವಿ ಅಧ್ಯಕ್ಷರಾದ ಅರ್ಶಾದ್, ಕೋಶಾಧಿಕಾರಿ ಅಮೀನ್, ಕಾರ್ಯದರ್ಶಿ ನಿಯಾಸ್ ಇದ್ದರು.