ಕೊಂಡಂಗೇರಿ:ಜೋಯಿಪೆರ ಕುಟಂಬದ ವಾರ್ಷಿಕ ಸಂತೋಷ ಕೂಟ

ಕೊಂಡಂಗೇರಿ:ಜೋಯಿಪೆರ ಕುಟಂಬದ ವಾರ್ಷಿಕ ಸಂತೋಷ ಕೂಟ

ಮಡಿಕೇರಿ:ಕೊಂಡಂಗೇರಿಯ 'ಜೋಯಿಪೆರ' ಕುಟುಂಬಸ್ಥರ ವಾರ್ಷಿಕ ಸಂತೋಷ ಕೂಟ ಕಾರ್ಯಕ್ರಮವು ಶನಿವಾರ ಕೊಂಡಂಗೇರಿಯಲ್ಲಿ ನಡೆಯಿತು.ಜೋಯಿಪೆರ ಕುಟುಂಬ ಸದಸ್ಯರಾದ ಹಿರಿಯರು, ಕಿರಿಯರು,ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಸೇರಿ 100 ಕ್ಕೂ ಸದಸ್ಯರು ಸದಸ್ಯರು ಸಂತೋಷ ಕೂಟದಲ್ಲಿ ಭಾಗವಹಿಸಿದ್ದರು‌.ಜೋಯಿಪೆರ ಕುಟುಂಬದಲ್ಲಿ ಮರಣವೊಂದಿದವರಿಗಾಗಿ ವಿಶೇಷ ಪ್ರಾರ್ಥನೆ ಕೂಡ ನೆರವೇರಿಸಿದ್ದರು.ಜೋಯಿಪೆರ ಕುಟುಂಬದ ತಕ್ಕ ಮುಖ್ಯಸ್ಥರಾದ ಜೆ.ಎ ಯೂಸುಫ್ ಹಾಜಿ ಸಂತೋಷ ಕೂಟದ ಅಧ್ಯಕ್ಷತೆಯನ್ನು ವಹಿಸಿದ್ದರು.ಜೋಯಿಪೆರ ಕುಟುಂಬದ ಅಧ್ಯಕ್ಷ ಹಾಗೂ ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ಹಿರಿಯ ಉಪಾಧ್ಯಕ್ಷರಾದ ಡಾ. ಕುಂಜ್ಹಬ್ದುಲ್ಲಾ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಜೋಯಿಪೆರ ಕುಟಂಬಸ್ಥರಿಗೆ ಶುಭಕೋರಿದರು.

ಈ ಸಂದರ್ಭ ಜೋಯಿಪೆರ ಕುಟಂಬಸ್ಥರಾದ ಜೆ.ಎ ಉಮ್ಮರ್ ಹಾಜಿ, ಜೆ.ಎ ಯೂಸುಫ್,ಅಬ್ಬಾಸ್, ಅಸ್ಕರ್ ಅಲಿ,ಜೆ.ಎಂ‌ಕೆ ಫೈಜಿ ಮತ್ತಿತರರು ಇದ್ದರು.