ಕೊಡಗು ಆರ್.ಸಿ.ಬಿ ಅಭಿಮಾನಿ ಬಳಗದಿಂದ ಸಂಭ್ರಮಾಚರಣೆಗೆ ಸಿದ್ಧತೆ!! ಆರ್.ಸಿ.ಬಿ ಅಭಿಮಾನಿ ಬಳಗದಿಂದ ಸದ್ಯದಲ್ಲೇ ಕೊಡಗಿನಲ್ಲಿ ನಡೆಯಲಿದೆ ವಿಶೇಷ ಕಾರ್ಯಕ್ರಮ

ಮಡಿಕೇರಿ: ಕಳೆದ 18 ವರ್ಷದಿಂದ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಪ್ರಾಮಾಣಿಕ ಅಭಿಮಾನಿಗಳು ಇರುವ ಏಕೈಕ ತಂಡ ನಮ್ಮ ಆರ್.ಸಿ.ಬಿ, ಈ ಬಾರಿ ಆರ್ ಸಿ ಬಿ ತಂಡ ಉತ್ತಮ ಪ್ರದರ್ಶನ ತೋರಿ ಪೋಯಿಂಟ್ ಟೇಬಲ್ ನಲ್ಲಿ ದ್ವಿತೀಯ ಸ್ಥಾನ ಪಡೆದಿದೆ.ವಿರಾಟ್ ಕೊಹ್ಲಿಯ ಮೇಲಿನ ಅಭಿಮಾನ ಹಾಗು ಆರ್.ಸಿ.ಬಿ ಯ ಈ ಬಾರಿಯ ಪ್ರದರ್ಶನವನ್ನು ಮನದಲ್ಲಿ ಇಟ್ಟು ಕೊಡಗಿನ ಆರ್.ಸಿ.ಬಿ ಅಭಿಮಾನಿ ಬಳಗದಿಂದ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ದಿನಾಂಕ ಸ್ಥಳವನ್ನು ನಿರ್ಧರಿಸಲಾಗುವುದು, ಎಲ್ಲಾ ಅಭಿಮಾನಿ ಬಳಗ ಸಹಕಾರ ನೀಡಬೇಕಾಗಿ ವಿನಂತಿ ಕೊಡಗು ಆರ್.ಸಿ.ವಿ ಅಭಿಮಾನಿ ಬಳಗ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.