ಕೊಡಗು ಜಿಲ್ಲೆಯಲ್ಲಿ ಗಾಳಿ-ಮಳೆಯ ಆರ್ಭಟ:ಎರಡು ದಿನದಲ್ಲೇ ನೆಲಕ್ಕುರುಳಿದ 197 ವಿದ್ಯುತ್ ಕಂಬಗಳು

ಮಡಿಕೇರಿ: ಸೆಸ್ಕ್ ಮಡಿಕೇರಿ ವಿಭಾಗ ವ್ಯಾಪ್ತಿಯಲ್ಲಿ ನಿನ್ನೆ ಹಾಗೂ ಇವತ್ತು ಸುರಿದ ವಿಪರೀತ ಗಾಳಿ ಮಳೆಗೆ ಈ ವರೆಗೆ ಸುಮಾರು 197 ಕಂಬಗಳು ಹಾನಿಯಾಗಿದೆ.ಅಲ್ಲಲ್ಲಿ ಮರಗಳು ಕಂಬಗಳು ಬಿದ್ದು ರಸ್ತೆ ಸಂಚಾರಕ್ಕೆ ತೊಂದರೆ ಆಗಿದ್ದು, ಸೆಸ್ಕ್ ವ್ಯಾಪ್ತಿಯ ಪವರ್ ಮೆನ್ ಗಳು ಹಾಗೂ ಗ್ಯಾಂಗ್ ಮೆನ್ ಜತೆಗೆ ಶಾಖಾಧಿಕಾರಿ ಗಳು ಸಾರ್ವಜನಿಕರ ಸಹಕಾರದಿಂದ ತೆರವು ಕೆಲಸ ಮಾಡುತ್ತಿದ್ದು. ಜತೆಗೆ 15 ಗುತ್ತಿಗೆ ದಾರರ ತಂಡ ಕೆಲಸ ಮಾಡುತ್ತಿದ್ದು ಗ್ರಾಹಕರಿಗೆ ವಿದ್ಯುತ್ ಮರು ಸಂಪರ್ಕ ಮಾಡಲು ಪ್ರಯತ್ನಿಸಿದ್ದಾರೆ ಎಂದು ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ಎಂ.ರಾಮಚಂದ್ರ ಅವರು ತಿಳಿಸಿದ್ದಾರೆ.