ಗರಗಂದೂರು-ಕಾಜೂರು ಊರುಸ್ :ಸೋಮವಾರ ಸಮಾರೋಪ ಸಮಾರಂಭ

ಮಡಿಕೇರಿ:ಕೊಡಗು ಜಿಲ್ಲೆಯ ಸುಂಟ್ಟಿಕೊಪ್ಪ-ಮಾದಾಪುರ ಸಮೀಪವಿರುವ ಸುಪ್ರಸಿದ್ಧ ಝಿಯಾರತ್ ಕೇಂದ್ರ,ನೊಂದವರ ಆಶಾಕಿರಣ,ನಿರ್ಗತಿಕರ ನೆಲೆಬೀಡು,ಸರ್ವ ಸಮಸ್ಯೆಗಳಿಗೂ ಪರಿಹಾರ ಕೇಂದ್ರವಾದ ಗರಗಂದೂರು ಹರದೂರು ಕಾಜೂರಿನಲ್ಲಿ ಅಂತಿಮ ವಿಶ್ರಾಂತಿ ಪಡೆಯುತ್ತಿರುವ ಶುಹುದಾಕಳ್ ರವರ ಹೆಸರಿನಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಉರೂಸ್ ಮುಬಾರಕ್ ಕಾರ್ಯಕ್ರಮದ ಸಮಾರೋಪ ಸಮಾರಂಭವು ಸೋಮವಾರ ಮಧ್ಯಾಹ್ನ 12.30 ಗಂಟೆ ನಡೆಯಲಿದೆ ಎಂದು ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೋಮವಾರ ಮಧ್ಯಾಹ್ನ 12.30 ಗಂಟೆಗೆ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗರಗಂದೂರು ಮಸ್ಜಿದುನ್ನೂರ್ ಮುಸ್ಲಿಂ ಜಮಾಅತ್ ಅಧ್ಯಕ್ಷ ಎಂ.ಅಬ್ದುಲ್ಲಾ ವಹಿಸಲಿದ್ದಾರೆ.
ಕಾರ್ಯಕ್ರಮದ ಸ್ವಾಗತವನ್ನು ಪ್ರಧನಾ ಕಾರ್ಯದರ್ಶಿ ಎ.ಎಖ ಅಝೀಝ್ ಮಾಡಲಿದ್ದಾರೆ.
ಉದ್ಘಾಟನೆಯನ್ನು ಜಮಾಅತ್ ಕಮಿಟಿ ಉಪಾಧ್ಯಕ್ಷ ಆರಿಫ್ ಸಖಾಫಿ ಮಾಡಲಿದ್ದು,ಪ್ರಾಸ್ತಾವಿಕ ಭಾಷಣವನ್ನು ಮಹಲ್ ಖತೀಬರಾದ ಅಬ್ದುಲ್ ಹಕೀಂ ಅನ್ವಾರಿ ಅಲ್ ಅಹ್ ಸನಿ ಮಾಡಲಿದ್ದಾರೆ.
ಮುಖ್ಯ ಪ್ರಭಾಷಣವನ್ನು ರಾಶಿದ್ ಅನ್ವಾರಿ ಅಯ್ಯಂಗೇರಿ ಮಾಡಲಿದ್ದು,
ಮುಖ್ಯ ಅತಿಥಿಗಳಾಗಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ,ಮಾಜಿ ಶಾಸಕರಾದ ಕೆ.ಎಂ ಇಬ್ರಾಹಿಂ, ಹರದೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮುಸ್ತಫಾ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪಿ.ಎಂ ಲತೀಫ್,ಕುಶಾಲನಗರ ತಾಲ್ಲೂಕೂ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿಪಿ ಶಶಿಧರ್,ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹನೀಫ್ ಚೋಕಂಡಳ್ಳಿ, ಎವರ್ ಗ್ರೀನ್ ಮಾಲೀಕ ಎ.ನಿ ಅಝೀಝ್,ಕಾಫಿ ಬೆಳೆಗಾರರಾದ ಸೋಮಶೇಖರ್, ಹರದೂರು ಗ್ರಾಮ ಪಂಚಾಯಿತಿ ಸದಸ್ಯ ಎಸಿ ಸುಬ್ಬಯ್ಯ,ಹರದೂರು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸಲೀಂ, ಹೊಸತೋಟ ಮಹಲ್ ಕಮಿಟಿ ಅಧ್ಯಕ್ಷ ಅಕ್ಬರ್,ಕಾರ್ಯದರ್ಶಿ ಮಜೀದ್,ಹಾಗೂ ಸಮಾರೋಪ ದುಆ ನೇತೃತ್ವವನ್ನು ಅಸಯ್ಯಿದ್ ಮುಹಮ್ಮದ್ ಮದಿನಿ ಮೊಗ್ರಾಲ್ ತಂಙಲ್ ವಹಿಸಲಿದ್ದಾರೆ.
ಮಧ್ಯಾಹ್ನ ಮೂರು ಗಂಟೆಗೆ ಎಲ್ಲರಿಗೂ ಅನ್ನದಾನವನ್ನು ಏರ್ಪಡಿಸಲಾಗಿದೆ ಎಂದು ಕಾಜೂರು ಉರೂಸ್ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.