ಗೋಲ್ಡ್ ಕಪ್ ಫುಟ್ಬಾಲ್:ಟಿಬೆಟಿಯನ್ ಬೈಲುಕೊಪ್ಪ ಹಾಗೂ ಬೆಟ್ಟಗೇರಿ ಎಫ್‌ಸಿ ತಂಡಕ್ಕೆ ಗೆಲುವು

ಸುಂಟಿಕೊಪ್ಪ: ಜಿಎಂಪಿ ಶಾಲಾ ಮೈದಾನದಲ್ಲಿ ಬ್ಲೂ ಬಾಯ್ಸ್ ಯುವಕ ಸಂಘದ ವತಿಯಿಂದ ನಡೆಯುತ್ತಿರುವ 26 ನೇ ವರ್ಷದ ಡಿ. ಶಿವಪ್ಪ ಸ್ಮಾರಕ ರಾಜ್ಯಮಟ್ಟದ ಗೋಲ್ಡ್ ಕಪ್ ಫುಟ್ಬಾಲ್ ಟೂರ್ನಿಯ ಬುಧವಾರ ನಡೆದ ಪಂದ್ಯದಲ್ಲಿ ಟಿಬೆಟಿಯನ್ ಬೈಲುಕೊಪ್ಪ ಮತ್ತು ಬೆಟ್ಟಗೇರಿ ಎಫ್.ಸಿ ತಂಡಗಳು ಜಯಗಳಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿದೆ.
ಮೊದಲ ಪಂದ್ಯವು ಟಿಬೆಟಿಯನ್ ಎಫ್.ಸಿ. ಬೈಲುಕೊಪ್ಪ ಮತ್ತು ವಿಜಯನಗರ ಎಫ್.ಸಿ.ಮೈಸೂರು ತಂಡಗಳ ನಡುವೆ ನಡೆಯುತು.ಬಲಿಷ್ಠ ಆಟಗಾರರನ್ನು ಹೊಂದಿದ್ದ ಟಿಬೆಟಿಯನ್ ತಂಡ ಪ್ರಾರಂಭದಿಂದಲೂ ಉತ್ತಮ ಪಾಸ್ ಮತ್ತು ಚಾಣಕ್ಷತನದ ಆಟಗಳ ಮೂಲಕ ಮನರಂಜನೆ ನೀಡಿದರು.ಉತ್ತಮ ಪಾಸ್ ಗಳ ಮೂಲಕ ಮುನ್ನುಗ್ಗಿದ ಟಿಬೆಟಿಯನ್ ತಂಡದ ಮುನ್ನಡೆ ಆಟಗಾರ ಟೆಸ್ಸಿ ಮೊದಲಾರ್ಧದ 4ಮತ್ತು 6 ನೇ ನಿಮಿಷದಲ್ಲಿ ಹೊಡೆದ ಚೆಂಡನ್ನು ಮೈಸೂರು ತಂಡದ ಗೋಲುಕೀಪರ್ ಯಶ್ವಂತ್ ಆಕರ್ಷಕವಾಗಿ ತಡೆಯುವ ಮೂಲಕ ತಂಡಕ್ಕೆ ಭದ್ರಕೋಟೆಯಂತೆ ನಿಂತರು.ಆಕ್ತಮಣಕಾರಿ ಆಟಕ್ಕೆ ಒತ್ತು ನೀಡಿದ ಟಿಬೆಟಿಯನ್ ತಂಡ ಮೈಸೂರು ತಂಡಕ್ಕೆ ಆಘಾತವವನ್ನು ನೀಡಿದರು.ಪಂದ್ಯದ 13 ನಿಮಿಷದಲ್ಲಿ ಜಿಗ್ಮ ಆಕರ್ಷವಾದ ಹೊಡೆತ ಗೋಲುಪಟ್ಟಿಗೆ ತಗುಲಿ ಒಳನುಗ್ಗುವುದರ ಮೂಲಕ 1 ಗೋಲುಗಳ ಮುನ್ನಡೆ ತಂದುಕೊಟ್ಟರು.ಹೊಂದಾಣಿಕೆಯ ಆಟಕ್ಕೆ ಒತ್ತು ನೀಡಿದ ಎರಡು ತಂಡಗಳು ಪ್ರೇಕ್ಷಕರಿಗೆ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದವು.ಇದರೊಂದಿಗೆ ಮೊದಲಾರ್ಧದಲ್ಲಿ ಟಿಬೆಟಿಯನ್ ತಂಡ 1-0 ಗೋಲುಗಳಿಂದ ಮುನ್ಬಡೆ ಪಡೆದುಕೊಂಡಿತು.
ದ್ಚಿತೀಯಾರ್ಧ ಪ್ರಾರಂಭವಾಗುತ್ತಿದ್ದಂತೆ ಟಿಬೆಟಿಯನ್ ತಂಡದ ಮುನ್ನಡೆ ಆಟಗಾರ ಚಂಗ್ ಬಾ ಆಶ್ಚರ್ಯಕರ ರೀತಿಯಲ್ಲಿ ಗೋಲು ಬಾರಿಸಿ ಮೈಸೂರು ತಂಡಕ್ಕೆ ಆಘಾತ ನೀಡಿದರು.ಚೆಂಡನ್ನು ಸಂಪೂರ್ಣವಾಗಿ ತನ್ನ ಹಿಡಿತದಲ್ಲಿ ಇಟ್ಟುಕೊಂಡ ಟಿಬೆಟಿಯನ್ ತಂಡ ಆಕರ್ಷಕ ಆಟದ ಮೂಲಕ ಮೈಸೂರು ತಂಡವನ್ನು ಕಟ್ಟಿಹಾಕಿ ಚೆಂಡನ್ನು ತನ್ನ ಹತೋಟಿಯಲ್ಲಿಟ್ಟುಕೊಂಡಿತು.ಪಂದ್ಯದ 10 ನಿಮಿಷದಲ್ಲಿ ಮತ್ತೊಮ್ಮೆ ಜಂಗ್ ಬಾ ಗೋಲುಕೀಪರ್ ಕಣ್ತಪ್ಪಿಸಿ ಸುಲಭ ಗೋಲನ್ನು ಬಾರಿಸಿದರು. ಮತ್ತೆ ಮೈಸೂರು ತಂಡದ ಮೇಲೆ ಲಗ್ಗೆಯಿಟ್ಟ ಟಿಬೆಟಿಯನ್ ಆಟಗಾರ ಕುಂಗ ಅವರು ಸಿಕ್ಕಿದ ಅವಕಾಶವನ್ನು ಬಳಸಿಕೊಂಡು17 ನಿಮಿಷದಲ್ಲಿ ಗೋಲಾಗಿ ಪರಿವರ್ತಿಸುವುದರ ಮೂಲಕ ಜಯದ ನಗೆ ಬೀರಿದರು.ಯುವ ಆಟಗಾರರನ್ನು ಒಳಗೊಂಡ ಮೈಸೂರು ತಂಡ ಟಿಬೆಟಿಯನ್ ತಂಡಕ್ಕೆ ತಲೆಬಾಗುವುದರ ಮೂಲಕ ಟಿಬೆಟಿಯನ್ ಬೈಲುಕೊಪ್ಪ ತಂಡ 4-0 ಗೋಲುಗಳ ಮೂಲಕ ಜಯಗಳಿಸಿ ಫ್ರೀ ಕ್ಚಾರ್ಟರ್ ಹಂತಕ್ಕೆ ಪ್ರವೇಶ ಪಡೆಯಿತು.
ದಿನದ ಎರಡನೇ ಪಂದ್ಯವು ಬೆಟ್ಟಗೇರಿ ಎಫ್.ಸಿ.ಬೆಟ್ಟಗೇರಿ ಮತ್ತು ಸಿಟಿಜನ್ ಎಫ್.ಸಿ.ಉಪ್ಪಳ ತಂಡಗಳ ನಡುವೆ ನಡೆಯಿತು.ಉಪ್ಪಳ ತಂಡದಲ್ಲಿ ಸಂತೋಷ್ ಟ್ರೋಫಿ ಟೂರ್ನಿಯನ್ನು ಆಡಿದ ಆಟಗಾರರಿದ್ದರೆ, ಬೆಟ್ಟಗೇರಿ ತಂಡದಲ್ಲಿ ರಾಜ್ಯಮಟ್ಟವನ್ನು ಪ್ರತಿನಿಧಿಸಿದ ಆಟಗಾರರನ್ನು ಹೊಂದಿದ್ದು ಉತ್ತಮ ಆಟದ ಪ್ರದರ್ಶನಗಳ ಮೂಲಕ ಜನರ ಚಪ್ಪಾಳೆ ಗಿಟ್ಟಿಸಿತು.ಎರಡು ತಂಡದ ಆಟಗಾರರು ಗೋಲುಪಟ್ಟಿಗೆ ಚೆಂಡನ್ನು ಹೊಡೆಯುವುದರ ಮೂಲಕ ಎಲ್ಲರನ್ನು ತುದಿಗಾಲಿನಲ್ಲಿ ನಿಲ್ಲಿಸಿತು.ಕ್ಷಣಕ್ಷಣಕ್ಕೂ ರೋಚಕತೆಯಿಂದ ಕೂಡಿತ್ತು. ಸಮಬಲದ ಪ್ರದರ್ಶನದಿಂದ ಮೊದಲಾರ್ಧದ 12 ನಿಮಿಷದಲ್ಲಿ ಬೆಟ್ಟಗೇರಿ ತಂಡದ ವಹೀಜು ಹಾಕಿಕೊಟ್ಟ ಪಾಸನ್ನು ರಕ್ಷಿತ್ ಆಕರ್ಷಕವಾದ ಹೊಡೆತದ ಮೂಲಕ. ಗೋಲಾಗಿ ಪರಿವರ್ತಿಸಿ ತಂಡಕ್ಕೆ ಮುನ್ನಡೆ ತಂದರು.ಈ ನಡುವೆ ಉಪ್ಪಳ ತಂಡದ ಆಟಗಾರರು ಮಿಂಚಿನ ಹೊಡೆತಗಳ ಮೂಲಕ ಮನರಂಜಿಸಿದರೂ ಗೋಲು ಹೊಡೆಯುವಲ್ಲಿ ವಿಫಲರಾದರು.ದ್ವಿತೀಯಾರ್ಧದಲ್ಲಿ ಉಪ್ಪಳ ತಂಡದ ಆಕರ್ಷಕ ಹೊಂದಾಣಿಕೆಯ ಆಟದ ಮೂಲಕ ಪಂದ್ಯದ 10 ನೇ ನಿಮಿಷದಲ್ಲಿ ಉಪ್ಪಳ ತಂಡಸ ಮೂಸ ಅವರು ಉತ್ತಮ ಗೋಲು ಹೊಡೆಯುವ ಮೂಲಕ ಸಮಬಲ ಕಾಯ್ದುಕೊಂಡರು..
ಈ ಗೋಲಿನಿಂದ ಎದೆಗುಂದದೆ ಬೆಟ್ಟಗೇರಿ ತಂಡ ತನ್ನದೇ ಚಾಕಚಕ್ಯತೆಯ ಮೂಲಕ ಹಂತ ಹಂತವಾಗಿ ಉಪ್ಪಳ ತಂಡದ ಗೋಲು ಪಟ್ಟಿಯೊಳಗೆ ಚೆಂಡು ಹೊಡೆಯುವ ಮೂಲಕ ಮನರಂಜನೆ ನೀಡಿದರು.ಇದೇ ವೇಳೆ ಬೆಟ್ಟಗೇರಿ ತಂಡದ ಮುನ್ನಡೆ ಆಟಗಾರ ಮನೋಜ್ ಅವರು ಪಂದ್ಯದ 17 ನೇ ನಿಮಿಷದಲ್ಲಿ ಹೊಡೆದ ಆಕರ್ಷಕ ಗೋಲು ತಂಡಕ್ಕೆ ಜಯದ ನಗೆ ಬೀರಲಾರಂಭಿಸಿತು.ಕೊನೆಯ ಹಂತದವರೆಗೂ ಉಪ್ಪಳ ತಂಡ ಹರಸಾಹಸ ಮಾಡಿದರೂ ಬೆಟ್ಟಗೇರಿ ತಂಡದ ಆಟಗಾರರ ರಕ್ಷಣಾತ್ಮಕ ಆಟಕ್ಕೆ ತಲೆಬಾಗಬೇಕಾಯಿತು.ಇದರೊಂದಿಗೆ ಬೆಟ್ಟಗೇರಿ ಎಫ್.ಸಿ ಬೆಟ್ಟಗೇರಿ ತಂಡವು ಸಿಟಿಜನ್ ಎಫ್.ಸಿ.ಉಪ್ಪಳ ತಂಡವನ್ನು ಸೋಲಿಸಿ ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶ ಪಡೆಯಿತು.
ನಾಳಿನ ಪಂದ್ಯಗಳು:
ಮಧ್ಯಾಹ್ನ 1.30 ಗಂಟೆಗೆ
ಬ್ಲೂ ಮೌಂಟೇನ್ ಎಫ್‌ಸಿ.ಊಟಿ ಮತ್ತು ಕ್ಯಾಲಿಕಟ್ ಎಫ್.ಸಿ.ಕ್ಯಾಲಿಕಟ್
ಮಧ್ಯಾಹ್ನ 2.30 ಗಂಟೆಗೆ ವಹಿಲ್ ಪೈ ಎಫ್.ಸಿ.ತಮಿಳುನಾಡು ಮತ್ತು ಮೊಗ್ರಲ್ ಎಫ್‌ಸಿ ಕುಂಬ್ಳೆ
ಮಧ್ಯಾಹ್ನ 3.30ಗಂಟೆಗೆ ಯಂಗ್ ವಾರಿಯರ್ಸ್ ಎಫ್.ಸಿ.ಕೆಜಿಎಫ್ ಮತ್ತು ಟಿಬೆಟಿಯನ್ ಬೈಲುಕೊಪ್ಪ
ಸಂಜೆ 4.30 ಗಂಟೆಗೆ
ಅಶೋಕ ಎಫ್.ಸಿ.ಮೈಸೂರು ಮತ್ತು ಟ್ರೆಡಿಸನಲ್ ಟೂರಿಸಂ ಎಫ್.ಸಿ.ತುರುಚ್ಚಿ
What's Your Reaction?






