ಚೆಕ್ಕೇರ ಕ್ರಿಕೆಟ್ ಕಪ್ ಫೈನಲ್ ಉದ್ಘಾಟನೆ: ಎಎಸ್ ಪೊನ್ನಣ್ಣ ಅವರ ಆಕರ್ಷಕ ಬ್ಯಾಟಿಂಗ್& ಬೌಲಿಂಗ್
ಪೊನ್ನಂಪೇಟೆ: ಕಾರ್ಯನಿಮಿತ್ತ ಹುದಿಕೇರಿ ಮೂಲಕ ಬೆಂಗಳೂರಿಗೆ ತೆರಳುತ್ತಿದ್ದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣನವರು, ಸ್ಥಳೀಯ ಮೈದಾನದಲ್ಲಿ ಚೆಕ್ಕೇರ ಕ್ರಿಕೆಟ್ ನಮ್ಮೆ ಫೈನಲ್ ಪಂದ್ಯಾಟ ಆರಂಭಗೊಳ್ಳುತ್ತಿರುವುದನ್ನು ಗಮನಿಸಿದರು. ಈ ಹಿಂದೆ ಇದೇ ಕ್ರೀಡಾಕೂಟವನ್ನು ಮಾನ್ಯ ಶಾಸಕರು ವಿದ್ಯುಕ್ತವಾಗಿ ಉದ್ಘಾಟನೆ ಮಾಡಿದ್ದರು.ಮೈದಾನಕ್ಕೆ ಆಗಮಿಸಿದ ಗಣ್ಯಾತಿಗಣ್ಯ ಅತಿಥಿಯನ್ನು ಗಮನಿಸಿ ಹರ್ಷಿತರಾದ ಆಯೋಜಕರು ಹಾಗೂ ಕ್ರಿಕೆಟ್ ಪಟುಗಳು, ಶಾಸಕರನ್ನು ಅದ್ಧೂರಿಯಾಗಿ ಮೈದಾನದತ್ತ ಬರಮಾಡಿಕೊಂಡರು. ಶಾಸಕರ ಕ್ರೀಡಾ ಮನೋಭಾವದಿಂದ ಪುಳಕಿತರಾದ ಆಯೋಜಕರು, ಮಾನ್ಯ ಶಾಸಕರಲ್ಲಿ ಹಲವು ಸಮಯ ಮೈದಾನದಲ್ಲಿ ಕಳೆಯುವಂತೆ ಕೇಳಿಕೊಂಡಾಗ, ತಮ್ಮ ಅದ್ಭುತ ಬ್ಯಾಟಿಂಗ್ ಶೈಲಿ ಹಾಗೂ ಆಕರ್ಷಕ ಬೌಲಿಂಗ್ ಮೂಲಕ ಮಾನ್ಯ ಶಾಸಕರು ನೆರೆದ ಪ್ರೇಕ್ಷಕರ ಮನರಂಜಿಸಿದರು. ಶಾಸಕರು ಎಲ್ಲರಿಗೆ ಶುಭ ಹಾರೈಸುತ್ತಾ, ಈ ಕ್ರೀಡಾಕೂಟದ ಯಶಸ್ವಿಗೆ ಆಯೋಜಕರನ್ನು ಅಭಿನಂದಿಸಿ ಮೈಸೂರಿನತ್ತ ತಮ್ಮ ಪ್ರಯಾಣ ಮುಂದುವರಿಸಿದರು.ಈ ಸಂದರ್ಭದಲ್ಲಿ ಚೆಕ್ಕೇರ ಕುಟುಂಬಸ್ಥರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.