ಜನಪರ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ: ಶಾಸಕ ಎ.ಎಸ್ ಪೊನ್ನಣ್ಣವರಿಗೆ ಆಹ್ವಾನ

ಜನಪರ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ: ಶಾಸಕ ಎ.ಎಸ್ ಪೊನ್ನಣ್ಣವರಿಗೆ ಆಹ್ವಾನ

ಸಿದ್ದಾಪುರ:ನಿರಂತರವಾಗಿ ಸಾಮಾಜಿಕ ಚಟುವಟಿಕೆ ಹಾಗೂ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿರುವ ಮಾಲ್ದಾರೆಯ ಜನಪರ ಕ್ರೀಡಾ ಮತ್ತು ಯುವ ಜನಸಂಘದ ಆಶ್ರಯದಲ್ಲಿ ಮೇ 19 ಮತ್ತು 20 ರಂದು ಮಾಲ್ದಾರೆ ಪ್ರೌಢಶಾಲಾ ಮೈದಾನದಲ್ಲಿ ನಡೆಯಲಿರುವ ಜನಪರ ಪ್ರೀಮಿಯರ್‌ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಮುಖ್ಯ ಅತಿಥಿಗಳಾಗಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್ ಪೊನ್ನಣ್ಣನವರನ್ನು ಇಂದು,ವಿರಾಜಪೇಟೆಯ ಅವರ ಕಛೇರಿಯಲ್ಲಿ ಆಹ್ವಾನ ಪತ್ರಿಕೆ ನೀಡಿ ಕ್ರೀಡಾಕೂಟಕ್ಕೆ ಆಹ್ವಾನಿಸಲಾಯಿತು.ಈ ಸಂದರ್ಭ ಜನಪರ ಕ್ರೀಡಾ ಮತ್ತು ಯುವಜನ ಸಂಘದ ಅಧ್ಯಕ್ಷ ಬಾವ ಮಾಲ್ದಾರೆ, ಸಂಘದ ಸ್ಥಾಪಕ ಪಿ.ವಿ ಅಂತೋಣಿ ಇದ್ದರು.