ತಂತಿ ಬೇಲಿಗೆ ಸಿಲುಕಿದ್ದ ಚಿರತೆ ರಕ್ಷಣೆ:ನಾಗರಹೊಳೆ ಅರಣ್ಯಕ್ಕೆ ಚಿರತೆ ಸ್ಥಳಾಂತರ

ತಂತಿ ಬೇಲಿಗೆ ಸಿಲುಕಿದ್ದ ಚಿರತೆ ರಕ್ಷಣೆ:ನಾಗರಹೊಳೆ ಅರಣ್ಯಕ್ಕೆ  ಚಿರತೆ ಸ್ಥಳಾಂತರ

ವಿರಾಜಪೇಟೆ(Coorgdaily):ಸಮೀಪದ ಕೆದಮುಳ್ಳೂರು ಗ್ರಾಮದ ಮಾಳೇಟಿರ ಗೌತಮ್ ಕಾಫಿ ತೋಟದಲ್ಲಿ ಮಂಗಳವಾರ ಬೆಳಗ್ಗೆ, ಚಿರತೆಯೊಂದು,ತಂತಿ ಬೇಲಿಗೆ ಸಿಲುಕಿ ಪ್ರಾಣ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದ ಘಟನೆ ನಡೆದಿದೆ. ಅರವಳಿಕೆ ನೀಡಿ ಚಿರತೆಗೆ ರಕ್ಷಣೆ ಪ್ರಾಥಮಿಕ ಚಿಕಿತ್ಸೆ ನೀಡಿ ಇದೀಗ ನಾಗರಹೊಳೆ ಅರಣ್ಯ ಕ್ಕೆ ಚಿರತೆ ಸ್ಥಳಾಂತರ ಮಾಡಲಾಗಿದೆ.