ಪೆಹಲ್ಗಾಮ್ ಉಗ್ರರ ದಾಳಿ ಖಂಡಿಸಿ ಹಿಂದೂ ಮಲಯಾಳಿ ಸಮಾಜದಿಂದ ಪ್ರತಿಭಟನೆ:
ವಿರಾಜಪೇಟೆ: ಕಾಶ್ಮೀರದ ಪೆಹಲ್ಗಾಂನಲ್ಲಿ ಪ್ರವಾಸಿಗರ ಮೇಲೆ ಗುಂಡಿನ ದಾಳಿಯನ್ನು ಖಂಡಿಸಿ ಹಿಂದೂ ಮಲಯಾಳಿ ಬಾಂಧವರು ಮತ್ತು ಸಂಘಟನೆಗಳಿಂದ ಮೊಂಬತ್ತಿ ಪ್ರತಿಭಟನೆ ನಡೆಸಿದರು.
ಶ್ರೀ ಮುತ್ತಪ್ಪನ್ ಮಲಯಾಳಿ ಸಮಾಜ, ಹಿಂದೂ ಮಲಯಾಳಿ ಅಸೋಶಿಯೇಷನ್, ಹಿಂದೂ ಮಲಯಾಳಿ ಅಸೋಶಿಯೇಷನ್ ಮಹಿಳಾ ಘಟಕ ವಿರಾಜಪೇಟೆ ಮತ್ತು ಎಸ್.ಎನ್.ಡಿ.ಪಿ ವಿರಾಜಪೇಟೆ ಶಾಖೆಯ ವತಿಯಿಂದ ಇಂದು ನಗರದ ಗಡಿಯಾರ ಕಂಬದ ಬಳಿ ಪೆಹಲ್ಗಾಂನಲ್ಲಿ ಉಗ್ರರಿಂದ ನಡೆಸಿದ ನರಮೇಧವನ್ನು ಖಂಡಿಸಿ ಮೊಂಬತ್ತಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಮುತ್ತಪ್ಪ ಮಲಯಾಳಿ ಸಮಾಜ ಅದ್ಯಕ್ಷ ಪಿ.ಜಿ. ಸುಮೇಶ್ ಉಗ್ರರ ದಾಳಿಯನ್ನು ಎಲ್ಲಾ ಸಮಾಜ ಬಾಂದವರು ಬಲವಾಗಿ ಖಂಡಿಸುತ್ತೇವೆ. ಕಾಶ್ಮೀರದಲ್ಲಿ ಆರ್ಟಿಕಲ್ ೩೭೦ ಜಾರಿಗೆ ಮಾಡಿರುವುದನ್ನು ಸಹಿಸಲಾರದ ಪಾಕಿಸ್ತಾನವು ಪ್ರತಿಕಾರದ ರೂಪದಲ್ಲಿ ಉಗ್ರರಿಂದ ಅಮಾಯಕ ಪ್ರವಾಸಿಗರ ಮೇಲೆ ಗುಂಡಿನ ದಾಳಿಗೈದು ಹತ್ಯೆ ಮಾಡಿದ್ದಾರೆ. ಪುಲ್ವಾಮ ದಾಳಿ ನಡೆದ ನಂತರದಲ್ಲಿ ಭೀಕರ ಹತ್ಯಾಕಾಂಡ ನಡೆದಿರುವುದು ದೇಶದ ಜನತೆಯನ್ನು ಬೆಚ್ಚಿಬೀಳಿಸಿದೆ. ಉಗ್ರರ ಧಮನ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಹಿಂದಿರುವ ಶಕ್ತಿಗಳ ವಿರುದ್ದ ಹೋರಾಡಲು ದೇಶ ಪ್ರಧಾನ ಮಂತ್ರಿಗಳು ಮತ್ತು ರಕ್ಷಣಾ ಸೇನೆಗಳೋಂದಿಗೆ ನಾವುಗಳು ಸಂಪೂರ್ಣ ಬೆಂಬಲ ಸೂಚಿಸುತ್ತೇವೆ ಎಂದು ಹೇಳಿದರು.
ಹಿಂದೂ ಮಲಯಾಳಿ ಅಸೋಶಿಯೇಷನ್ ವಿರಾಜಪೇಟೆ ಅಧ್ಯಕ್ಷರಾದ ಎ. ವಿನೂಪ್ ಕುಮಾರ್ ಮಾತನಾಡಿ ಪಾಕಿಸ್ತಾನದ ಉಗ್ರರು ಅಮಾಯಕ ಪ್ರವಾಸಿಗರ ಮೇಲೆ ನಡೆಸಿರುವ ಕೃತ್ಯ ರಾಕ್ಷಸ ಪ್ರವೃತ್ತಿಯಾಗಿದೆ. ಪ್ರವಾಸಿಗರನ್ನು ವಿವಸ್ತೃಗೊಳಿಸಿ ಹಿಂದೂ ಎನ್ನುವ ಕಾರಣಕ್ಕೆ ಭಿಬಿತ್ಸವಾಗಿ ಹತ್ಯೆ ಮಾಡಿರುವುದು ಖಂಡನೀಯ. ರಾಜ್ಯದಲ್ಲಿ ಅಂತಾರಿಕಭಿನ್ನಭಿಪ್ರಾಯಗಳಿವೆ ಎಂದು ಹೇಳಿಕೆ ನೀಡುತ್ತಿರುವ ರಾಜಕಾರಣಿಗಳು ಈ ರೀತಿ ಹೇಳಿಕೆಯನ್ನು ನಿಲ್ಲಬೇಕು. ನಾವು ಭಾರತೀಯರು ಎನ್ನುವ ಮನೋಭಾವ ಬೆಳಸಿಕೊಂಡು ಕೇಂದ್ರ ಸರ್ಕಾರದೊಂದಿಗೆ ಎಲ್ಲಾ ಸಮೂದಾಯಗಳು ಬೆಂಬಲವಾಗಿ ನಿಲ್ಲಬೇಕು. ಉಗ್ರವಾದಿಗಳಿಗೆ ಧಿಟ್ಟ ಉತ್ತರ ನೀಡುವಂತಾಗಬೇಕು ಎಂದು ಮನವಿ ಮಾಡುತಿದ್ದೇನೆ ಎಂದು ಹೇಳಿದರು.
ಪಾಪಿ ಪಾಕಿಸ್ತಾನದ ವಿರುದ್ದ ಘೋಷಣೆಗಳನ್ನು ಕೂಗಿದರು, ಕೃತ್ಯವನ್ನು ಖಂಡಿಸಿ ಉಗ್ರವಾದ ವಿರುದ್ದ ಘೋಷಣೆ ಮಾಡಿದರು. ಘಟನೆಯಲ್ಲಿ ಮಡಿದ ಕುಟುಂಭಗಳೀಗೆ ಪುಷ್ಪ ನಮನ ಸಲ್ಲಿಸಿ ಮೊಂಬತ್ತಿ ಹಚ್ಚಿ ಕೃತ್ಯವನ್ನು ಖಂಡಿಸಿದರು.
ಹಿಂದೂ ಮಲಯಾಳಿ ಅಸೋಶಿಯೇಷನ್ ನ ಮಹಿಳಾ ಘಟಕದ ಅಧ್ಯಕ್ಷೆ ಶೀಭಾ ಪ್ರಥ್ವಿನಾಥ್, ಮಾತನಾಡಿ ಪೆಹಲ್ಗಾಂ ನಲ್ಲಿ ನಡೆದಿರುವ ಭೀಕರ ಹತ್ಯೆಯನ್ನು ಖಂಡಿಸುತ್ತೇವೆ. ಮಹಿಳೆಯರು, ಮಕ್ಕಳು ಎನ್ನುವ ಕನಿಕರ ಭಾವವಿಲ್ಲದ್ದೆ ಧರ್ಮ ಹಾಗೂ ಜಾತಿ ಆಧಾರದ ಮೇಲೆ ದಾಳಿ ನಡೆಸಿರುವುದು ಖಂಡನೀಯ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಎಸ್.ಎನ್.ಡಿ.ಪಿ. ವಿರಾಜಪೇಟೆ ಶಾಖೆಯ ಅದ್ಯಕ್ಷರಾದ ಟಿ.ಎನ್. ನಾರಾಯಣ್, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ಜನಾಂಗ ಬಾಂದವರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.