ಪೊನ್ನಂಪೇಟೆ ಕೊಡವ ಸಮಾಜ ಆಡಳಿತ ಮಂಡಳಿ ಚುನಾವಣೆ: ಕಾಳಿಮಾಡ ಎಂ.ಮೋಟಯ್ಯ ತಂಡಕ್ಕೆ 9 ಸ್ಥಾನ, ಚೀರಂಡ ಎಸ್ ಸುಬ್ಬಯ್ಯ ತಂಡಕ್ಕೆ 3 ಸ್ಥಾನ

ಪೊನ್ನಂಪೇಟೆ ಕೊಡವ ಸಮಾಜ ಆಡಳಿತ ಮಂಡಳಿ ಚುನಾವಣೆ:  ಕಾಳಿಮಾಡ ಎಂ.ಮೋಟಯ್ಯ ತಂಡಕ್ಕೆ 9 ಸ್ಥಾನ, ಚೀರಂಡ ಎಸ್ ಸುಬ್ಬಯ್ಯ ತಂಡಕ್ಕೆ 3 ಸ್ಥಾನ

ಪೊನ್ನಂಪೇಟೆ:ತೀವ್ರ ಕುತೂಹಲ ಕೆರಳಿಸಿದ್ದ ಪ್ರತಿಷ್ಠಿತ ಪೊನ್ನಂಪೇಟೆ ಕೊಡವ ಸಮಾಜ ಆಡಳಿತ ಮಂಡಳಿಯ 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಕಾಳಿಮಾಡ ಎಂ.ಮೋಟಯ್ಯ ಅವರು (1057) ಅತ್ಯಧಿಕ ಮತಗಳನ್ನು ಪಡೆದುಕೊಂಡಿದ್ದಾರೆ. ಉಳಿದಂತೆ ಚೀರಂಡ ಎಸ್ ಸುಬ್ಬಯ್ಯ (ಕಂದ ಸುಬ್ಬಯ್ಯ) (997), ಕೋಟೆರ ಬಿ. ಉತ್ತಪ್ಪ (ಕಿಶನ್) (978), ಕಳ್ಳಿಚಂಡ ಎಸ್. ದೇವಯ್ಯ (ಚಿಪ್ಪ) 949, ಚೆಪ್ಪುಡಿರ ಎ. ಕಾರ್ಯಪ್ಪ (918), ಆಲೆಮಾಡ ಡಿ. ಸುಧೀರ್ (872), ಅಜ್ಜಿಕುಟ್ಟೀರ ಯಂ. ಸುಬ್ಬಯ್ಯ (ಪೃಥ್ವಿ) (868), ಕೊಣಿಯಂಡ ಎಸ್. ಸೋಮಯ್ಯ (ಸಂಜು) (856), ಅಡ್ಡಂಡ ಸಿ. ಪ್ರಕಾಶ್ (ಕುಶಾಲಪ್ಪ) (847) ಮತ ಪಡೆದುಕೊಂಡು ಆಡಳಿತ ಮಂಡಳಿಗೆ ಆಯ್ಕೆಯಾಗಿದ್ದಾರೆ. ಮಹಿಳೆಯರ ಕ್ಷೇತ್ರದಲ್ಲಿ ಮೂಕಳೇರ ಕಾವ್ಯ ಕಾವೇರಮ್ಮ (997), ಗುಮ್ಮಟೀರ ಜಿ. ಗಂಗಮ್ಮ (926), ಚಿರಿಪ್ಪಂಡ ಯು. ಬೋಜಮ್ಮ (ಇಮ್ಮಿ) (889) ಜಯ ಗಳಿಸುವ ಮೂಲಕ ಮುಂದಿನ ಆಡಳಿತ ಮಂಡಳಿಗೆ ಆಯ್ಕೆಯಾಗಿದ್ದರು. ಉಳಿದಂತೆ ಚುನಾವಣೆಯಲ್ಲಿ ಭಾಗವಹಿಸಿದ ಅಭ್ಯರ್ಥಿಗಳಲ್ಲಿ ಪಾರುವಂಗಡ ಎಂ ಚಂಗಪ್ಪ 826, ಚೆಕ್ಕೇರ ಎಂ ಸೋಮಯ್ಯ 818, ಕಳ್ಳಿಚಂಡ ಸಿ ಮುತ್ತಪ್ಪ 785, ಗಾಡಂಗಡ ಎಂ ದೇವಯ್ಯ 714, ಮತ್ರಂಡ ಜಿ.ಪೊನ್ನಣ್ಣ 677, ಚೇಂದಿರ ಎಂ. ಬೋಪ್ಪಣ್ಣ 672, ಕೊಟ್ಟಂಗಡ ಜೆ. ಅಯ್ಯಪ್ಪ 581, ಚೆಪ್ಪುಡಿರ ಎಸ್ ಮನೋಜ್ ಕುಮಾರ್ 574 ಮತ ಪಡೆದುಕೊಂಡರೆ ಮಹಿಳಾ ಅಭ್ಯರ್ಥಿಗಳಲ್ಲಿ ಚೆಕ್ಕೇರ ಎಸ್.ವಾಣಿ 801, ಮೂಕಳೇರ ಆರ್. ಲೀಲಾವತಿ 685, ಹಾಗೂ ಚಟ್ಟಂಗಡ ಅಶ್ವಿನಿ ಗೀತಾ ಅವರು 677 ಮತ ಗಳನ್ನು ಪಡೆದುಕೊಂಡು ಪರಾಭವಗೊಂಡರು. ಚುನಾವಣಾಧಿಕಾರಿಯಾಗಿ ಕಟ್ಟೇರ ಲಾಲಪ್ಪ ಅವರು ಕಾರ್ಯನಿರ್ವಹಿಸಿದರು.

ವರದಿ: ಚಂಪಾ ಗಗನ, ಪೊನ್ನಂಪೇಟೆ.