ಪೊನ್ನಂಪೇಟೆ:ಮನೆಯಂಗಳಕ್ಕೆ ಬಂದ ಚಿರತೆ....
ಪೊನ್ನಂಪೇಟೆ: ತಾಲ್ಲೂಕಿನ ಕಾನೂರು ಸಮೀಪದ ಕೊತೂರು ಗ್ರಾಮದ ಅಜ್ಜಮ್ಮಡ ಪವನ್ ಪೊನ್ನಪ್ಪ ಎಂಬುವರ ಮನೆಗೆ ಸೋಮವಾರ ಬೆಳಗಿನ ಜಾವ ಚಿರತೆಯೊಂದು ಮನೆಯ ಮುಂಭಾಗದ ಆವರಣಕ್ಕೆ ಬಂದು ತೆರಳಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಚಿರತೆಯು ಮನೆಯ ಮುಂಭಾಗದ ಗೇಟ್ ವರೆಗೆ ಬಂದು ಮತ್ತೆ ವಾಪಸ್ಸಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ದಕ್ಷಿಣ ಕೊಡಗಿನ ವಿವಿಧ ಭಾಗಗಳಲ್ಲಿ ಚಿರತೆ ಮತ್ತು ಹುಲಿ ಹಾಡಹಗಲೆ ರಾಜಾರೋಷವಾಗಿ ತೋಟದಲ್ಲೇ ಸುತ್ತಾಡುತ್ತಿದೆ.ಅರಣ್ಯ ಇಲಾಖೆ ಮುಂಜಾಗೃತ ಕ್ರಮಕೈಗೊಳ್ಳದಿದ್ದರೆ,ದೊಡ್ಡ ಅಪಾಯ ಎದುರಾಗಲಿದೆ.