ಪ್ರವಾಸಿ ಬಸ್ಸ್ ಮತ್ತು ಆಟೋ ರಿಕ್ಷಾ ನಡುವೆ ಭೀಕರ ಅಪಘಾತ: ಆಟೋ ರಿಕ್ಷಾ ಚಾಲಕನಿಗೆ ಗಾಯ!: ಸುಂಟ್ಟಿಕೊಪ್ಪ ಸಮೀಪದ 7ನೇ ಹೊಸಕೋಟೆಯಲ್ಲಿ ಘಟನೆ

ಪ್ರವಾಸಿ ಬಸ್ಸ್ ಮತ್ತು ಆಟೋ ರಿಕ್ಷಾ ನಡುವೆ ಭೀಕರ ಅಪಘಾತ:  ಆಟೋ ರಿಕ್ಷಾ ಚಾಲಕನಿಗೆ ಗಾಯ!:  ಸುಂಟ್ಟಿಕೊಪ್ಪ ಸಮೀಪದ 7ನೇ ಹೊಸಕೋಟೆಯಲ್ಲಿ ಘಟನೆ

ಸುಂಟ್ಟಿಕೊಪ್ಪ:ಪ್ರವಾಸಿ ಬಸ್ ಮತ್ತು ಆಟೋ ರಿಕ್ಷಾ ನಡುವೆ ಅಪಘಾತ ಸಂಭವಿಸಿ ಆಟೋ ಚಾಲಕ ಗಾಯಗೊಂಡಿರುವ ಘಟನೆ ಗುರುವಾರ ಸಂಜೆ ಸುಂಟ್ಟಿಕೊಪ್ಪ ಸಮೀಪದ 7ನೇ ಹೊಸಕೋಟೆ ಸರ್ಕಾರಿ ಶಾಲೆ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಕೇರಳ ರಾಜ್ಯದ ನೋಂದಣಿ ಆಗಿರುವ ವಿರಾಜಪೇಟೆಯ ಖಾಸಗಿ ಬಸ್ ಕುಶಾಲನಗರ ಕಡೆಯಿಂದ ಬರುತ್ತಿದ್ದಾಗ ಸುಂಟಿಕೊಪ್ಪದಿಂದ ಬಂದ ಆಟೋ ರಿಕ್ಷಾ ಪರಸ್ಪರ ಎದುರಾಗಿ ಡಿಕ್ಕಿ ಸಂಭವಿಸಿದೆ.  ಆಟೋ ಚಾಲಕ ಜೀವನ್ ಎಂಬಾತ ಗಾಯಗೊಂಡು ಜಿಲ್ಲಾಸ್ಪತ್ರೆ ಮಡಿಕೇರಿಯಲ್ಲಿ ದಾಖಲಾಗಿದ್ದಾನೆ. ಈ ಅವಘಡದಿಂದಾಗಿ ಆಟೋ ರಿಕ್ಷಾ ರಸ್ತೆಯಲ್ಲಿ ಮಗುಚಿಕೊಂಡು ನಜ್ಜು ಗುಜ್ಜಾಗಿದೆ.