ಬಾಳುಗೋಡು: ಶ್ರದ್ಧಾ ಭಕ್ತಿಯಿಂದ ಸಂಪನ್ನಗೊಂಡ ಶ್ರೀ ಅಗ್ನಿ ಚಾಮುಂಡಿ ವಾರ್ಷಿಕ ತೆರೆ ಮಹೋತ್ಸವ

ವಿರಾಜಪೇಟೆ: ಶ್ರೀ ಅಗ್ನಿ ಚಾಮುಂಡಿ ದೇವಿಯ ವಾರ್ಷಿಕ ತೆರೆ ಮಹೋತ್ಸವವು ಎರಡು ದಿನಗಳ ಕಾಲ ನಡೆದು ಶ್ರದ್ಧಾ ಭಕ್ತಿಯಿಂದ ಸಂಪನ್ನಗೊಡಿತು.ವಿರಾಜಪೇಟೆ ತಾಲೂಕಿನ ಬಾಳುಗೋಡು ಪೆರುಂಬಾಡಿ ಗ್ರಾಮದ ಶ್ರೀ ಅಗ್ನಿ ಚಾಮುಂಡಿ ದೇವಿಯ 31ನೇ ವರ್ಷ ವಾರ್ಷಿಕ ತೆರೆ ಮಹೋತ್ಸವ ಶ್ರದ್ಧಾ ಭಕ್ತಿಯಿಂದ ಜರುಗಿತು. ತಾ.05 ರಂದು ಪ್ರಾಥ:ಕಾಲ ಗಣಪತಿ ಹೋಮದೊಂದಿಗೆ ಆರಂಭವಾಗಿ ಪ್ರದಾನ ಹೋಮ ನವಕ ಕಳಶ ಆಶ್ಲೇಷ ಬಲಿ ತಕ್ಕರ ಮನೆಯಿಂದ ಭಂಡಾರ ತರಲಾಯಿತು. ನಾಗದೇವಿಗೆ ವಿಶೇಷ ಪೂಜೆ ದೇವರದರ್ಶನ ನಡೆಯಿತು. ಚಾಮುಂಡೇಶ್ವರಿಗೆ ಅಭಿಷೇಕ ನಡೆದು ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಸಂಜೆ 7 ಗಂಟೆಗೆ ಪ್ರಮುಖ ಆಕರ್ಷಣೆಯಾದ ಅಗ್ನಿ ಕೊಂಡ ರಚನೆ ಮಾಡುವುದು, ಸುಮಾರು 14 ಅಡಿ ಎತ್ತರದ ವರೆಗೆ ಉತ್ಸವಕ್ಕೆ ಮುಂದಿನ ಮೂರು ದಿನಗಳಲ್ಲಿ ಹಸಿ ಮರಗಳನ್ನು ಕಡಿದು ಗ್ರಾಮಸ್ಥರು ನೆರವಿನಿಂದ ದೇವಲಾಯದ ಆವರಣದಲ್ಲಿ ಬೃಹತ್ ಅಗ್ನಿಕೊಂಡ ನಿರ್ಮಿಸಲಾಯಿತು. ಬಳಿಕ ದೇವಿಯನ್ನು ನೆನೆದು ಕೊಂಡಕ್ಕೆ ಅಗ್ನಿಯನ್ನು ಸ್ಪರ್ಶಿಸಲಾಯಿತು. ಕುಟ್ಟಂದಿ ಕುತ್ತುನಾಡ್ ಗ್ರಾಮದ ಕಿಶನ್ ಪಣಿಕರ್ ಅವರ ನೇತೃತ್ವದಲ್ಲಿ ಬಳಿಕ ಕ್ರಮವಾಗಿ,ವಿಷ್ಣುಮೂರ್ತಿ ತೋಟಂ, ಚಾಮುಂಡಿ ಅಮ್ಮ ತೋಟಂ, ಕುಟ್ಟಿಚಾತನ್ ತೆರೆ, ಭೈರವ ತೆರೆ, ಕರಿವಾಳ್ ಭಗವತಿ ಮತ್ತು ಉಚ್ಚುಟಮ್ಮ ತೆರೆಗಳು ಮುಂಜಾನೆಯ ವರೆಗೆ ನಡೆಯಿತು. ತಾ. 06 ರಂದು ಬೆಳಿಗ್ಗೆ ಉತ್ಸವದ ಪ್ರಮುಖ ಘಟ್ಟವಾದ ಶ್ರೀ ಚಾಮುಂಡಿ ( ವಿಷ್ಣುಮೂರ್ತಿ ಕೋಲ) ಬೃಹತ್ ಕೊಂಡವನ್ನು ಹಾಯುವುದು ನಡೆಯಿತು. ಗುಳಿಗನ್ ತೆರೆ, ಚಾಮುಂಡಿ ಅಮ್ಮ ತೆರೆ ನಡೆಯಿತು. ಎರಡು ದಿನಗಳ ಕಾಲ ನಡೆದ ಉತ್ಸವದಲ್ಲಿ ದೆಗುಲ ಸಮಿತಿ ವತಿಯಿಂದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು.

ಶ್ರೀ ಅಗ್ನಿ ಚಾಮುಂಡಿ ದೇವಾಲಯ ಬಾಳುಗೋಡು ಸಮಿತಿಯ ತಕ್ಕರಾದ ಕಬ್ಬಚ್ಚೀರ ಕುಟುಂಭ ವರ್ಗ ಭೈ ಅದ್ಯಕ್ಷರಾದ ಕೊಕ್ಕಲೆಮಾಡ ಮಣಿ, ಕಾರ್ಯದರ್ಶಿ ಟಿ.ಜಿ. ಗಣೇಶ್, ಮತ್ತು ಆರ್ಚಕರು ದೈವ ನರ್ತಕರು, ಸಮಿತಿಯ ಸದಸ್ಯರು, ವಿವಿಧ ಗ್ರಾಮಗಳಿಂದ ಆಗಮಿಸಿದ ಗ್ರಾಮಸ್ಥರು ಉತ್ಸವದಲ್ಲಿ ಭಾಗಿಗಳಾಗಿ ಶ್ರೀ ಚಾಮುಂಡಿ ದೇವಿಯ ಮತ್ತು ತೆರೆಗಳ ದರ್ಶನ ಪಡೆದು ಪುನಿತರಾದರು.

ವರದಿ:ಕಿಶೋರ್ ಕುಮಾರ್ ಶೆಟ್ಟಿ