ಬೂಕರ್ ಪ್ರಶಸ್ತಿ: ಜೂನ್ 02ರಂದು ದೀಪಾ ಭಸ್ತಿಗೆ ಅಭಿನಂದನಾ ಸಮಾರಂಭ

ಮಡಿಕೇರಿ(Coorgdaily):ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತರಾದ ಭಾನು ಮುಷ್ತಾಕ್ ಮತ್ತು ದೀಪಾ ಭಾಸ್ತಿ ಅವರಿಗೆ ಕನ್ನಡ ಮತ್ತು ಸಂಸ್ಕಂತಿ ಇಲಾಖೆಯಿಂದ ಇದೇ ಜೂನ್ 2 ರಂದು ಬೆಂಗಳೂರಿನಲ್ಲಿ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ. ಈ ಸಂಬಂಧ ಕನ್ನಡ ಮತ್ತು ಸಂಸ್ಕಂತಿ ಇಲಾಖೆ ಸಹಾಯಕ ನಿರ್ದೇಶಕರಾದ ಕುಮಾರ ಮತ್ತು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ಅರೆಭಾಷೆ ಸಂಸ್ಕಂತಿ ಮತ್ತು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಚಿನ್ನಸ್ವಾಮಿ ಅವರು ಶುಕ್ರವಾರ ನಗರದ ದೀಪಾ ಭಾಸ್ತಿ ಅವರ ನಿವಾಸಕ್ಕೆ ತೆರಳಿ ಸರ್ಕಾರದ ಪರವಾಗಿ ಜಿಲ್ಲಾಡಳಿತ ವತಿಯಿಂದ ಆಮಂತ್ರಣ ಪತ್ರ ನೀಡಿ ಕಾರ್ಯಕ್ರಮಕ್ಕೆ ಆಗಮಿಸುವಂತೆ ಕೋರಿದರು.
ಜೊತೆಗೆ ಕನ್ನಡ ಮತ್ತು ಸಂಸ್ಕಂತಿ ಸಚಿವರ ಹಾಗೂ ಇಲಾಖೆಯ ನಿರ್ದೇಶಕರ ಪತ್ರವನ್ನು ಇದೇ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕಂತರಾದ ದೀಪಾ ಭಾಸ್ತಿ ಅವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಚೆಟ್ಟಿರ ನಾಣಯ್ಯ ಹಾಗೂ ಸುಬೇದಾರ್ ಗೌಡಂಡ ತಿಮ್ಮಯ್ಯ ಇದ್ದರು.