ಮಂಗಳೂರು: 12ನೇ ಮಹಡಿಯಿಂದ ಬಿದ್ದು ಬಾಲಕಿ ಸಾವು? ಕಾರಣವೇನೂ ಗೊತ್ತೇ! ವಿರಾಜಪೇಟೆ ಮೂಲದ ವಿದ್ಯಾರ್ಥಿ ಮೃತ್ಯು!

ಮಂಗಳೂರು: 12ನೇ ಮಹಡಿಯಿಂದ ಬಿದ್ದು ಬಾಲಕಿ ಸಾವು?  ಕಾರಣವೇನೂ ಗೊತ್ತೇ! ವಿರಾಜಪೇಟೆ ಮೂಲದ ವಿದ್ಯಾರ್ಥಿ ಮೃತ್ಯು!

ಮಡಿಕೇರಿ: ವಸತಿ ಸಂಕೀರ್ಣವೊಂದರ 12ನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ಮಂಗಳೂರಿನ ಕುತ್ತಾರ್‌ನಲ್ಲಿ ನಡೆದಿದೆ.ವೀರಾಜಪೇಟೆ ಅಪ್ಪಯ್ಯಸ್ವಾಮಿ ರಸ್ತೆ ನಿವಾಸಿ ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಯ ವೈದ್ಯ ದಂಪತಿ ಡಾ. ಮುಮ್ತಾಝ್ ಅಹಮದ್ ಹಾಗೂ ಡಾ. ಖಮರ್‌ಝಹಾ ಬಾನು ಎಂಬವರ ಪುತ್ರಿ ಹಿಬಾ ಐಮನ್(15) ಮೃತ ದುರ್ದೈವಿ ಬಾಲಕಿ.ಹಿಬಾ ಐಮನ್ 12ನೇ ಮಹಡಿಯಲ್ಲಿರುವ ಮನೆಯ ಬಾಲ್ಕನಿಯಲ್ಲಿ ಬಟ್ಟೆ ಒಣಗಲು ಹಾಕುತ್ತಿದ್ದ ವೇಳೆ ಆಯ ತಪ್ಪಿಬಿದ್ದು ಸ್ಥಳದಲ್ಲೇ ಮೃತರಾಗಿದ್ದಾರೆ. ಉಳ್ಳಾಲ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಿಬಾರವರ ಅಂತ್ಯಕ್ರಿಯೆ ವೀರಾಜಪೇಟೆಯ ಮುಸ್ಲಿಮ್ ಖಬರಸ್ಥಾನದಲ್ಲಿ ನಡೆಯಿತು.