ಮಡಿಕೇರಿ ಅರಣ್ಯ ಉಪ ವಿಭಾಗದ ನೂತನ ಡಿಸಿಎಫ್ ಆಗಿ ಅಭಿಷೇಕ್ ನೇಮಕ: ಭಾಸ್ಕರ್ ಬೆಂಗಳೂರಿಗೆ ವರ್ಗಾವಣೆ

ಮಡಿಕೇರಿ ಅರಣ್ಯ ಉಪ ವಿಭಾಗದ ನೂತನ ಡಿಸಿಎಫ್ ಆಗಿ ಅಭಿಷೇಕ್ ನೇಮಕ:  ಭಾಸ್ಕರ್ ಬೆಂಗಳೂರಿಗೆ ವರ್ಗಾವಣೆ

ಮಡಿಕೇರಿ:ಅಭಿಷೇಕ್ ವಿ (ಐಎಫ್‌ಎಸ್) ಅರಣ್ಯ ಉಪ ಸಂರಕ್ಷಣಾಧಿಕಾರಿ ಕಾಡುಗೋಡಿ ಬೆಂಗಳೂರು ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ. ಮತ್ತು ಮುಂದಿನ ಆದೇಶದವರೆಗೆ ಮಡಿಕೇರಿ ವಿಭಾಗದ ಅರಣ್ಯ ಉಪ ಸಂರಕ್ಷಣಾಧಿಕಾರಿಯಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಮಡಿಕೇರಿ  ಅರಣ್ಯ ವಿಭಾಗದ ಡಿಸಿಎಫ್ ಭಾಸ್ಕರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ, ಮುಂದಿನ ಆದೇಶದವರೆಗೆ ಬೆಂಗಳೂರಿನ ಅರಣ್ಯ ಅರಣ್ಯ ಭವನಕ್ಕೆ ವರ್ಗಾವಣೆ ಮಾಡಲಾಗಿದೆ.