ವಾಲ್ನೂರು-ತ್ಯಾಗತ್ತೂರು: ವಿದ್ಯುತ್ ತಂತಿಗಳ ಮೇಲೆ ನಿಂತಿರುವ ಮರದ ಕೊಂಬೆಗಳು! ಅಧಿಕಾರಿಗಳ ನಿರ್ಲಕ್ಷ್ಯ

ಚೆಟ್ಟಳ್ಳಿ:ವಾಲ್ನೂರು-ತ್ಯಾಗತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತ್ಯಾಗತ್ತೂರಿನ ಹಲವು ಕಡೆಗಳಲ್ಲಿ ವಿದ್ಯುತ್ ಸಂಪರ್ಕ ಹಾದು ಹೋಗಿರುವ ತಂತಿಗಳ ಮೇಲೆ ಮರ-ಗಿಡಗಳು ಸುತ್ತುಕೊಂಡಿದೆ. ಮಳೆಗಾಲದ ಮುಂಚಿತವಾಗಿ ಅಧಿಕಾರಿಗಳು ಮರಗಳನ್ನು ತೆರವುಗೊಳಿಸುವುದಾಗಿ ಹೇಳಿದ್ದರು ಆದರೆ ಚೆಟ್ಟಳ್ಳಿಯ K E B ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.