ವಿರಾಜಪೇಟೆ: ಅನಾಥ ವ್ಯಕ್ತಿಯ ಅಂತ್ಯಕ್ರಿಯೆ ನೆರವೇರಿಸಿಕೊಟ್ಟು ಮಾನವೀಯತೆ ಮೆರೆದ ಸಹಾರ ಫ್ರೆಂಡ್ಸ್

ವಿರಾಜಪೇಟೆ: ಅನಾಥ ವ್ಯಕ್ತಿಯ ಅಂತ್ಯಕ್ರಿಯೆ ನೆರವೇರಿಸಿಕೊಟ್ಟು ಮಾನವೀಯತೆ ಮೆರೆದ ಸಹಾರ ಫ್ರೆಂಡ್ಸ್

ವಿರಾಜಪೇಟೆ :ತಾಲ್ಲೂಕಿನ ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಳ ಗ್ರಾಮದ ಸ್ನೇಹ ಭವನದಲ್ಲಿ ವಾಸವಿದ್ದ ವೃದ್ಧನೋರ್ವ ಮೃತಪಟ್ಟ ಹಿನ್ನೆಲೆ, ಒಬ್ಬಂಟಿಗನಾಗಿ ಜೀವನ ನಡೆಸುತ್ತಿದ್ದ ವ್ಯಕ್ತಿಯ ಅಂತ್ಯಕ್ರಿಯೆ ಮಾಡಲು ಸ್ನೇಹ ಭವನದ ವ್ಯವಸ್ಥಾಪಕರು ಕೇಳಿಕೊಂಡ ಮೇರೆಗೆ ತಕ್ಷಣ ಸ್ಪಂದಿಸಿದ ಪುರಸಭೆಯ ಸದಸ್ಯರಾದ ಎಂ.ಕೆ. ಜಲೀಲ್ ಅವರು ಸಹಾರ ಫ್ರೆಂಡ್ಸ್ ವಿರಾಜಪೇಟೆಯ ಸದಸ್ಯರ ಬಳಿ ಕೇಳಿದ ಕೊಡಲೇ ಸದಸ್ಯರು ಸ್ವಂದಿಸಿ ಮಾನವೀಯತೆ ಮೆರೆದಿದ್ದಾರೆ.

ಸದಸ್ಯರಾದ ರವೂಫ್, ಸೇಂಟ್ ಫಿಲೋಮಿನಸ್ ಆಂಬ್ಯುಲೆನ್ಸ್ ಮಾಲೀಕರು ಆದಂತಹ ಪಿಂಟೊ ಅವರನ್ನು ಸಂಪರ್ಕಿಸಿದ್ದು ಯಾವುದೇ ಚಾಲನಾ ವೆಚ್ಚ ಪಡೆಯದೆ ಇತರ ಸ್ನೇಹಿತರ ಸಹಾಯದಿಂದ ಇಂದು ಹಿರಿಯ ವ್ಯಕ್ತಿಯ ಅಂತ್ಯ ಕ್ರಿಯೆಯನ್ನು ನೆರವೇರಿಸಿಕೊಟ್ಟು,ಮಾನವೀಯತೆ ಮೆರೆದಿದ್ದಾರೆ.