ವಿರಾಜಪೇಟೆ: ವಿಜಯನಗರ ನೂತನ ರಸ್ತೆ ಉದ್ಘಾಟನೆ

ವಿರಾಜಪೇಟೆ: ವಿಜಯನಗರ ನೂತನ ರಸ್ತೆ ಉದ್ಘಾಟನೆ

ವಿರಾಜಪೇಟೆ :ನಗರ ವ್ಯಾಪ್ತಿಯ, ವಿಜಯನಗರ 3ನೇ ಹಂತದಲ್ಲಿ ನೂತನವಾಗಿ ನಿರ್ಮಿಸಿದ ರಸ್ತೆಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ನವರು ಭಾಗವಹಿಸಿದರು.     

ವಿರಾಜಪೇಟೆ ನಗರದಾದ್ಯಂತ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುವ ಮಾನ್ಯ ಶಾಸಕರು ವಿಶೇಷವಾಗಿ ರಸ್ತೆಗಳ ಅಭಿವೃದ್ಧಿಯತ್ತ ಗಮನಹರಿಸಿದ್ದಾರೆ. ಇಂದು ವಿಜಯನಗರ 3ನೇ ಹಂತದ ಜನಸಾಮಾನ್ಯರ ಅನುಕೂಲ ಎಂದು ಉತ್ತಮ ಗುಣಮಟ್ಟದ ಕಾಂಕ್ರೀಟ್ ರಸ್ತೆ ನಿರ್ಮಾಣಗೊಂಡಿದ್ದು ಇದೀಗ ಸಾರ್ವಜನಿಕರ ಉಪಯೋಗಕ್ಕೆ ಸಿದ್ಧಗೊಂಡಿದೆ.  ಈ ಸಂದರ್ಭದಲ್ಲಿ ವಿರಾಜಪೇಟೆ ಬ್ಲಾಕ್ ಅಧ್ಯಕ್ಷರಾದ ಪಟ್ಟಡ ರಂಜಿ ಪೂಣ್ಣಚ್ಚ, ಪುರಸಭೆ ಅಧ್ಯಕ್ಷರಾದ ದೇಚಮ್ಮ ಕಾಳಪ್ಪ,ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ‌ಘಟಕದ ಅಧ್ಯಕ್ಷ ಪಿ.ಎ ಹನೀಫ್,ರಫೀಕ್ ಕೋಳುಮಂಡ,ಹಾಗೂ ಪುರಸಭಾ ಸದಸ್ಯರು, ಕಾಂಗ್ರೆಸ್ ಮುಖಂಡರುಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.