ವಿರಾಜಪೇಟೆ:ನೆಹರು ನಗರದಲ್ಲಿ ಮರ ಬಿದ್ದು ಸಂಚಾರ ಸ್ಥಗಿತ :ಕೂಡಲೇ ಮರ ತೆರವುಗೊಳಿಸಿದ ವಿರಾಜಪೇಟೆ ರೆಸ್ಕ್ಯೂ ತಂಡ

ವಿರಾಜಪೇಟೆ: ನಗರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ,ಇಂದು ನಗರದ ನೆಹರು ನಗರದಲ್ಲಿ ಬಾರಿ ಗಾತ್ರದ ಮರ ನೆಲಕ್ಕುರುಳಿ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಕೊಂಡಿತ್ತು.ಮಾಹಿತಿ ತಿಳಿದ ತಕ್ಷಣ ಕಾರ್ಯಪವರ್ತರಾದ ಪುರಸಭೆ ಅಧ್ಯಕ್ಷರಾದ ದೇಚಮ್ಮ ಕಾಳಪ್ಪ, ಸದಸ್ಯರಾದ ಮತೀನ್ ಎಸ್ ಹೆಚ್, ಮೊಹಮ್ಮದ್ ರಾಫಿ, ತಮ್ಮ ರೆಸ್ಕ್ಯೂ ಟೀಮ್ ಕಟ್ಟಿಕೊಂಡು ಸ್ಥಳಕ್ಕೆ ಭೇಟಿ ನೀಡಿ ಮರವನ್ನು ಕಡಿದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಮೊಹಮ್ಮದ್ ನಯಾಜ್, ಹಬೀಬ್, ಝಕೀರ್ ಅವರು ಕೈಜೋಡಿಸಿದರು.