ವಿಶು ಕಪ್ ಫುಟ್ಬಾಲ್ ಪಂದ್ಯಾವಳಿ: ಕ್ರೀಡೆಯಲ್ಲಿ ಕಠಿಣ ಪರಿಶ್ರಮದಿಂದ ಮಾತ್ರ ಸಾಧನೆಯ ಗುರಿಮುಟ್ಟಲು ಸಾಧ್ಯ:ಎ.ಎಸ್ ಪೊನ್ನಣ್ಣ

ವರದಿ: ಕಿಶೋರ್ ಕುಮಾರ್ ಶೆಟ್ಟಿ
ವಿರಾಜಪೇಟೆ: ಕ್ರೀಡೆಯನ್ನು ಆಯ್ಕೆಗೊಳಿಸಿಸುವ ಪ್ರತಿಯೊಂದು ಕ್ರೀಡಾಪಟುವಿಗೆ ಗುರಿ ಎಂಬುದು ಮುಖ್ಯ. ಕಠಿಣ ಪರಿಶ್ರಮದಿಂದ ಮಾತ್ರ ಸಾಧನೆಯ ಗುರಿಮುಟ್ಟಲು ಸಾಧ್ಯ ಎಂದು ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರು ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್ ಪೊನ್ನಣ್ಣ ಅಭಿಪ್ರಾಯಪಟ್ಟರು.
ಹಿಂದೂ ಮಲಯಾಳಿ ಅಸೋಸಿಯೇಷನ್ (ರಿ) ವಿರಾಜಪೇಟೆ ವತಿಯಿಂದ ವಿಶು ಹಬ್ಬದ ಪ್ರಯುಕ್ತ ಹೊನಲು ಬೆಳಕಿನ ಪುರುಷರ ರಾಷ್ಟ್ರ ಮಟ್ಟದ 5+2 ಕಾಲ್ಚೆಂಡು ಪಂದ್ಯಾವಳಿಯನ್ನು ವಿರಾಜಪೇಟೆ ತಾಲೂಕು ಮೈದಾನದಲ್ಲಿ ಏರ್ಪಡಿಸಲಾಗಿತ್ತು. ಪಂದ್ಯಾಟದ ಸಮಾರೋಪ ಸಮಾರಂಭ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಶಾಸಕರು ಜಿಲ್ಲೆಯ ಅನೇಕ ಕ್ರೀಡಾ ಪಟುಗಳು ಉತ್ತಮ ಸಾಧನೆ ತೋರಿದ್ದಾರೆ.ತಂಡ ಆಯ್ಕೆಯ ಸಮಯದಲ್ಲಿ ದೈಹಿಕ ಸಾಮರ್ಥೈಯಿಲ್ಲದೆ ಆಯ್ಕೆಯಿಂದ ವಂಚಿತರಾಗುತ್ತಾರೆ. ಕಾರಣ, ಯೌವನದಲ್ಲಿ ಮಾದಕ ವಸ್ತುಗಳ ಉಪಯೋಗಕ್ಕೆ ಬಲಿಯಾಗುವುದು. ನಿತ್ಯ ವ್ಯಾಯಾಮದಿಂದ ದೇಹವನ್ನು ದೈಹಿಕವಾಗಿ ಸುಸ್ಥಿತಿಯಲ್ಲಿಡಲು ಸಾಧ್ಯವಾಗುತ್ತದೆ. ಪುಟ್ಬಾಲ್ ಕ್ರೀಡೆಯು ಪಶ್ಚಿಮ ಬಂಗಾಳ, ಮತ್ತು ನೆರೆಯ ಕೇರಳ ರಾಜ್ಯದಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಕರ್ನಾಟಕ ರಾಜ್ಯದಲ್ಲಿಯು ಕ್ರೀಡೆಯ ವ್ಯಾಮೋಹ ಹೆಚ್ಚುತ್ತಾ ಸಾಗಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪಂದ್ಯಾಟವನ್ನು ಆಯೋಜಿಸಿರುವುದು ಶ್ಲಾಘನೀಯ, ಸಂಸದರಾದ ಅಜಯ್ ಮಾಖನ್ ಅವರು ಕ್ರೀಡೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸುಸಜ್ಜಿತವಾದ ಕ್ರೀಡಾ ಸಂಕೀರ್ಣವನ್ನು ಸುಮಾರು 30 ಕೊಟಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ. ಸಂಕೀರ್ಣ ನಿರ್ಮಾಣ ಕಾರ್ಯಕ್ಕೆ ಸ್ಥಳ ನಿಗದಿಗೊಳಿಸುವ ಕಾರ್ಯಕ್ಕೆ ಮುನ್ನುಡಿ ಬರೆಯಲಾಗಿದೆ ಎಂದು ಹೇಳಿದರು.
ಹಿಂದೂ ಮಲಯಾಳಿ ಸಮಾಜ ಕೊಡಗು ಜಿಲ್ಲಾಧ್ಯಕ್ಷರಾದ ವಿ.ಎಂ. ವಿಜಯನ್ ಮಾತನಾಡಿ ಮಲಯಾಳಿ ಸಮಾಜವು ಜನಾಂಗದ ಒಳಿತಿಗಾಗಿ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ. ಇಲ್ಲಿಯು ಜನಾಂಗಕ್ಕೆ ಪೂರಕವಾಗಿ ವಿವಿಧ ಸಮಿತಿಗಳು ತನ್ನಾದೆಯಾದ ರೀತಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬಂದಿರುವುದು ಸಂತಸ ತಂದಿದೆ ಎಂದರು.
ಎಸ್.ಎನ್.ಡಿ.ಪಿ ಜಿಲ್ಲಾ ಶಾಖೆಯ ಅಧ್ಯಕ್ಷರಾದ ವಿ.ಕೆ. ಲೋಕೇಶ್ ಮಾತನಾಡಿ ಕ್ರೀಡೆ ಎಂಬುದು ಶಿಸ್ತು, ಸಮಯ ಪ್ರಜ್ಞೆ, ಮತ್ತು ಆರ್ಥಿಕ ಸದೃಡತೆ ಎಂದಾಗಿದೆ. ಎಲ್ಲಾ ಸಮಾನರು ಎಂಬ ಮನೋಭಾವ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ. ಆಕ್ರಮಣಕಾರಿ ಆಟ ಪ್ರದರ್ಶನದಿಂದ ಗುರಿಹೊಂದುವುದು ಕಷ್ಟಸಾದ್ಯ ಎಂದು ತಿಳಿಯಬೇಕು ಎಂದು ಹೇಳಿದರು.
ಹಿಂದೂ ಮಲಯಾಳಿ ಅಸೋಸಿಯೇಷನ್ ವಿರಾಜಪೇಟೆ ಅದ್ಯಕ್ಷರಾದ ಎ. ವಿನೂಪ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಜನಾಂಗ ಬಾಂಧವರಿಗಾಗಿ ವಿವಿಧ ಆಟೋಟ ಸ್ಪರ್ಧೇಗಳನ್ನು ಎರ್ಪಡಿಸಲಾಗಿತ್ತು. ಪುರುಷರು ಮತ್ತು ಮಹಿಳೆಯರಿಗೆ (ಪ್ರತ್ಯೇಕ) ಡಿಸ್ಕಸ್ಸ್ ಥ್ರೋ, ಶಾಟ್ ಪುಟ್, ಹಗ್ಗಜಗ್ಗಾಟ, ಹಾಗೂ ಮಕ್ಕಳಿಗೆ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಮೂಡಿಬಂದಿತು. ಕಾರ್ಯಕ್ರಮದ ವೇದಿಕೆಯಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿದ ಕ್ರೀಡಾಪಟುಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಹಿಂದೂ ಮಲಯಾಳಿ ಸಮಾಜ ಕೊಡಗು ಜಿಲ್ಲಾ ಉಪಾದ್ಯಕ್ಷರಾದ ಟಿ.ಕೆ. ಸುದೀರ್, ಪ್ರಧಾನ ಕಾರ್ಯದರ್ಶಿ ಉಣ್ಣಿಕೃಷ್ಣನ್, ಸ್ಥಾಪಕ ಅಧ್ಯಕ್ಷರಾದ ಕೆ.ಎಸ್. ರಮೇಶ್, ಹಿಂದೂ ಮಲಯಾಳಿ ಸಮಾಜ ಮೂರ್ನಾಡು ಅಧ್ಯಕ್ಷರಾದ ಬಾಬು, ಹಿಂದೂ ಮಲಯಾಳಿ ಸಮಾಜ ಸುಂಟಿಕೊಪ್ಪ ಅಧ್ಯಕ್ಷ ಶಶಿ, ಹಿಂದೂ ಮಲಯಾಳಿ ಸಮಾಜ ಒಂಟಿಅಂಗಡಿ ಅದ್ಯಕ್ಷ ನಂದಕುಮಾರ್, ಎಸ್,ಎನ್.ಡಿ.ಪಿ ಮಡಿಕೇರಿ ಶಾಖೆಯ ಅದ್ಯಕ್ಷರಾದ ಟಿ.ಆರ್. ವಾಸುದೇವ್, ಶ್ರೀ ಮುತ್ತಪ್ಪ ದೇವಾಲಯ ವಿರಾಜಪೇಟೆ ಸಮಿತಿಯ ಅಧ್ಯಕ್ಷರಾದ ಟಿ.ಕೆ.ರಾಜನ್, ಮುತ್ತಪ್ಪ ಮಲಯಾಳಿ ಸಮಾಜಂ ಅಧ್ಯಕ್ಷರಾದ ಸುಮೇಶ್, ಪುರಸಭೆಯ ಸದಸ್ಯರಾದ ಸುನಿತಾ (ಜೂನಾ), ನಾಡಹಬ್ಬ ಒಕ್ಕೂಟದ ಮಾಜಿ ಅಧಕ್ಷರಾದ ಬಿ.ಜಿ ಸಾಯಿನಾಥ್ ನಾಯಕ್ ವೇದಿಕೆಯಲ್ಲಿ ಉಪಸ್ಥಿತಿರಿದ್ದರು.
What's Your Reaction?






