ವೀರಮಡಿವಾಳ ಮಾಚಿದೇವರ ಸಂಘದ ನೂತನ ಅಧ್ಯಕ್ಷರಾಗಿ ಡಿಪಿ ರಾಜೇಶ್ ಆಯ್ಕೆ

ವೀರಮಡಿವಾಳ ಮಾಚಿದೇವರ ಸಂಘದ ನೂತನ ಅಧ್ಯಕ್ಷರಾಗಿ ಡಿಪಿ ರಾಜೇಶ್ ಆಯ್ಕೆ

ವಿರಾಜಪೇಟೆ:ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ವೀರಮಡಿವಾಳ ಮಾಚಿದೇವರ ಸಂಘದ ನೂತನ ಅಧ್ಯಕ್ಷರಾಗಿ ವಿರಾಜಪೇಟೆಯ ಡಿ.ಪಿ. ರಾಜೇಶ್ ಆಯ್ಕೆಯಾಗಿದ್ದಾರೆ.ಇತ್ತೀಚಿಗೆ ವಿರಾಜಪೇಟೆಯ ಪುರಭವನದಲ್ಲಿ ನಡೆದ ಸಭೆಯಲ್ಲಿ ನೂತನ ಆಡಳಿತ ಮಂಡಳಿಗೆ ಈ ಆಯ್ಕೆ ಪ್ರಕ್ರಿಯೆ ನಡೆದಿದ್ದು ಉಪಾಧ್ಯಕ್ಷರಾಗಿ ಗಿರಿಜಾ ಕಾಶಿ, ಡಿ.ಜಿ. ಕೇಶವ, ಪ್ರದಾನ ಕಾರ್ಯದರ್ಶಿಯಾಗಿ ಎಂ.ಆರ್ ಮಹಾದೇವ್, ಕಾರ್ಯದರ್ಶಿಯಾಗಿ, ಗಣೇಶ್ ಎಂ.ಕೆ., ಅಭಿಷೇಕ್ ಖಜಾಂಚಿಯಾಗಿ ಡಿ.ಟಿ. ವನಿತ ವಸಂತ, ನಿರ್ದೆಶಕರಾಗಿ ಎಂ.ವಿ. ಸತೀಶ್‌ಕುಮಾರ್, ರವಿ ಎಂ.ಬಿ., ವೇಣು ಬಲ್ಯಮಂಡೂರು, ಗಿರೀಶ್ ಡಿ.ಸಿ, ವಿನಿತ್ ಕುಮಾರ್ ಎಂ.ಆರ್. ರಮ್ಯ ಎಂ.ಎ., ದೇವರಾಜ್ ಆಯ್ಕೆಯಾಗಿದ್ದಾರೆ.

ಪ್ರಚಾರ ಸಮಿತಿ ಅಧ್ಯಕ್ಷರಾಗಿ ಎಂ.ಕೆ. ರವಿಕುಮಾರ್, ಕ್ರೀಡಾಕೂಟ ಸಮಿತಿ ಅಧ್ಯಕ್ಷರಾಗಿ ಎಂ.ಕೆ. ನಿತೀನ್ ಆಯ್ಕೆಗೊಂಡಿದ್ದಾರೆ.