ಹಾರಂಗಿ ಜಲಾಶಯದ ಸೇತುವೆ ಬದಿಯಲ್ಲಿ ಸೆಲ್ಫೀ ಹುಚ್ಚಾಟ!

ಹಾರಂಗಿ ಜಲಾಶಯದ ಸೇತುವೆ ಬದಿಯಲ್ಲಿ ಸೆಲ್ಫೀ ಹುಚ್ಚಾಟ!
ಹಾರಂಗಿ ಜಲಾಶಯದ ಸೇತುವೆ ಬದಿಯಲ್ಲಿ ಸೆಲ್ಫೀ ಹುಚ್ಚಾಟ!
ಹಾರಂಗಿ ಜಲಾಶಯದ ಸೇತುವೆ ಬದಿಯಲ್ಲಿ ಸೆಲ್ಫೀ ಹುಚ್ಚಾಟ!

ಕುಶಾಲನಗರವ:ಹಾರಂಗಿ ಪ್ರವಾಸಿ ತಾಣದಲ್ಲಿ ಭಾನುವಾರ ಬೆಳಿಗ್ಗೆಯಿಂದಲೇ ಹಾರಂಗಿ ಜಲಾಶಯದ ಮುಂಭಾಗದ ಸೇತುವೆ ಮೇಲ್ಭಾಗ ಪ್ರವಾಸಿಗರು ಸೆಲ್ಫಿ ಹಾಗೂ ಫೋಟೋ ತೆಗೆದುಕೊಳ್ಳಲು ಸೇತುವೆ ಮೇಲ್ಭಾಗವೇ ವಾಹನಗಳನ್ನು ನಿಲ್ಲಿಸಿಕೊಂಡಿದ್ದ ದೃಶ್ಯ ಕಂಡ ಬಂದಿತ್ತು. ಸೇತುವೆ ತಡೆಗೋಡೆ ಇಲ್ಲದೆ ಪ್ರವಾಸಿಗರು ಸೇತುವೆಯ ಎರಡು ಬದಿಗಳನ್ನು ನಿಂತು ಫೋಟೋ ತೆಗೆದುಕೊಳ್ಳುತ್ತಿರುವ ದೃಶ್ಯ ಭಾನುವಾರ ಕಂಡು ಬಂತು. ಇಲ್ಲಿ ಹಾರಂಗಿ ನೀರಾವರಿ ನಿಗಮದ ಇಲಾಖೆಯವರಾಗಲಿ ಪೊಲೀಸ್ ಇಲಾಖೆಯಾಗಲಿ ಯಾರೊಬ್ಬರೂ ಇಲ್ಲದೆ ಹಲವು ಸಮಯ ಟ್ರಾಫಿಕ್ ಜಾಮ್ ಆಗಿತ್ತು. ಹಾರಂಗಿಯಿಂದ ಯಡವನಾಡು ಭಾಗಕ್ಕೆ ತೆರಳುವ ವಾಹನ ಸವಾರರಿಗೆ ಕಿರಿಕಿರಿ ಉಂಟಾಗಿದೆ.

ವರದಿ: ಕೆ‌.ಆರ್ ಗಣೇಶ್ ಕೂಡಿಗೆ