ಹೊಸ್ಕೇರಿ: ಲಾರಿ ಕೆಟ್ಟು ನಿಂತು ಮರಗೋಡು ಸಿದ್ದಾಪುರ ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆ

ಹೊಸ್ಕೇರಿ: ಲಾರಿ ಕೆಟ್ಟು ನಿಂತು ಮರಗೋಡು ಸಿದ್ದಾಪುರ ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆ

ಮಡಿಕೇರಿ:ಮರಗೋಡು- ಹೊಸ್ಕೇರಿ ವ್ಯಾಪ್ತಿಯ ಸಿದ್ದಾಪುರಕ್ಕೆ ತೆರಳುವ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಚೊಳಂಗೋಡ್ ಸೇತುವೆ ತಿರುವಿನಲ್ಲಿ ಭಾರಿ ಸರಕು ಸಾಗಣೆಯ ಲಾರಿ ಕೆಟ್ಟು ನಿಂತು, ರಸ್ತೆಯಲ್ಲಿ ಸಂಚಾರಕ್ಕೆ ತೊಡಕಾಗಿ, ಪ್ರಯಾಣಿಕರು ಹಾಗೂ ವಾಹನ ಚಾಲಕರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು.ಈ ಹಿಂದೆಯೂ ಹಲವಾರು ಬಾರಿ ಇಲ್ಲಿ ವಾಹನ ಅಪಘಾತ ಸಂಭವಿಸಿದ್ಧು ಈ ಜಿಲ್ಲಾ ಮುಖ್ಯರಸ್ತೆಯ ತಿರುವಿನಲ್ಲಿ ಯಾವುದೇ ಸಂಚಾರ ಫಲಕವನ್ನು ಹಾಕದೆ ಇರುವುದರಿಂದ ಹೊಸ ಚಾಲಕರು ಈ ದೊಡ್ಡ ತಿರುವಿನ ಬಗ್ಗೆ ತಿಳಿಯದೇ ವಾಹನಗಳು ಯಂತ್ರಣ ತಪ್ಪಿ ಇಲ್ಲಿ ಅಪಘಾತ ಸಂಭವಿಸುತಿದ್ಧು, ಸಂಬಂಧ ಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮವನ್ನು ಕೈಗೂಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.