ಶ್ರದ್ಧಾ ಭಕ್ತಿಯಿಂದಜರುಗಿದ ಚೇಲಾವರ ಚೇಲಮಾನಿ ಶ್ರೀ ಚೋಯಿಲಿ ಶ್ರೀ ಭಗವತಿ ದೇವಸ್ಥಾನದ 15ನೇ ವಾರ್ಷಿಕೋತ್ಸವ

ಶ್ರದ್ಧಾ ಭಕ್ತಿಯಿಂದಜರುಗಿದ ಚೇಲಾವರ ಚೇಲಮಾನಿ ಶ್ರೀ ಚೋಯಿಲಿ ಶ್ರೀ ಭಗವತಿ ದೇವಸ್ಥಾನದ 15ನೇ ವಾರ್ಷಿಕೋತ್ಸವ

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು: ಚೆಯ್ಯಂಡಾಣೆ ಬಳಿಯ ಚೇಲಾವರ ಗ್ರಾಮದ ಚೇಲಮಾನಿ ಶ್ರೀ ಚೋಯಿಲಿ ಶ್ರೀ ಭಗವತಿ ದೇವಾಲಯದ 15ನೇ ವಾರ್ಷಿಕೋತ್ಸವವು ವಿವಿಧ ಧಾರ್ಮಿಕ ದೈವಕೋಲಗಳೊಂದಿಗೆ ಸಂಭ್ರಮ ಶ್ರದ್ಧಾ ಭಕ್ತಿಯಿಂದ ಜರುಗಿತು.ಉತ್ಸವದ ಅಂಗವಾಗಿ ಬಾಚಮ್ಮಂಡ ತಕ್ಕರ ಮನೆಯಿಂದ ಬಂಢಾರ ಆಗಮಿಸುವುದರ ಮೂಲಕ ಉತ್ಸವಕ್ಕೆ ಅಧಿಕೃತ ಚಾಲನೆ ದೊರೆಯಿತು. ರಾತ್ರಿ ದೀಪಾರಾಧನೆ, ತೂಚಂಬಲಿ ಮತ್ತು ದೇವರು ಹೊರಗೆ ಬರುವುದು ಹಾಗೂ ಮಹಾ ಪೂಜೆ ನಡೆಯಿತು.ಬಳಿಕ ದೇವರ ನೃತ್ಯ,ವಿಶೇಷ ಪೂಜೆ,ಎತ್ತು ಪೋರಾಟ,ತೆಂಗಿನಕಾಯಿಗೆ ಗುಂಡು ಹೊಡೆಯುವುದು,ಮಹಾ ಪೂಜೆ ನಡೆದ ಬಳಿಕ ಭಕ್ತಾಧೀಗಳಿಗೆ ಅನ್ನದಾನ ಕಾರ್ಯಕ್ರಮ ನೆರವೇರಿದ ಬಳಿಕ ದೇವರು ಹೊರಗೆ ಬರುವುದು ಮತ್ತು ನೆರಪು ನೃತ್ಯ,ಪೋನ್ನೊಲ ಸಾರ್ಥಾವು ದೇವಸ್ಥಾನಕ್ಕೆ ಮಲೆ ಮುರಿಯುವುದು,ಪೋನ್ನೊಲ ದೇವಸ್ಥಾನದಲ್ಲಿ ಪೂಜೆ, ಮಂಟಪದಲ್ಲಿ ವಸಂತ ಪೂಜೆ ರಾತ್ರಿ ಮಹಾಪೂಜೆ ನಡೆದ ಬಳಿಕ ವಿಶೇಷ ಪೂಜೆ ನಡೆದು ಮಧ್ಯಾಹ್ನ ಮಹಾಪೂಜೆ,ವಾರ್ಷಿಕ ಮಹಾಸಭೆ,ದೇವರು ಅವವೃತ ಸ್ನಾನಕ್ಕೆ ಹೊರಟು ನಂತರ ದೇವರ ನೃತ್ಯ,ಮಹಾಪೂಜೆ ನಡೆದ ಬಳಿಕ ಭಂಡಾರ ಲೆಕ್ಕ,ಶುದ್ಧ ಕಲಶ ಸಮಾರಾಧನೆ ಪೂಜೆ,ಮಂತ್ರಾಕ್ಷತೆ,ದೇವತಕ್ಕರ ಮನೆಗೆ ಭಂಡಾರ ಇಳಿಯುವ ಕಾರ್ಯಕ್ರಮ ನಡೆಯಿತು.

ಪೂಜಾ ಕೈಂಕರ್ಯದ ನೇತೃತ್ವವನ್ನು ಅರ್ಚಕರಾದ ಅಖಿಲೇಶ್ ವಹಿಸಿರು.ದೇವರ ನೃತ್ಯದ ನೇತೃತ್ವ ವನ್ನು ಮಲೆತೀರಿಕೆ ದೇವಸ್ಥಾನದ ಅರ್ಚಕರಾದ ಪ್ರದೀಪ್ ವಹಿಸಿದರು.ಉತ್ಸವದಲ್ಲಿ ನಡೆದ ವಿಶೇಷ ಚಂಡೆ ಮೇಳ ನೋಡುಗರ ಗಮನ ಸೆಳೆಯಿತು.ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಪ್ರಸಾದ ಸ್ವೀಕರಿಸಿ ಪುನೀತರಾದರು.ಈ ಸಂದರ್ಭ ದೇವಾಲಯದ ತಕ್ಕ ಮುಖ್ಯಸ್ಥರು, ಆಡಳಿತ ಮಂಡಳಿ ಪದಾಧಿಕಾರಿಗಳು ಊರಿನ ಪರ ಊರಿನ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.