ಕೊಂಡಂಗೇರಿಯಲ್ಲಿ ಮಹಿಳೆಯ ಮೇಲೆ ಹಲ್ಲೆ ಮಾಡಿ ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿದ್ದ ಯುವಕನ ಮೇಲೆ ಗ್ರಾಮಸ್ಥರಿಂದ ಮಾರಣಾಂತಿಕ ಹಲ್ಲೆ

ಕೊಂಡಂಗೇರಿಯಲ್ಲಿ ಮಹಿಳೆಯ ಮೇಲೆ ಹಲ್ಲೆ ಮಾಡಿ ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿದ್ದ ಯುವಕನ ಮೇಲೆ ಗ್ರಾಮಸ್ಥರಿಂದ ಮಾರಣಾಂತಿಕ ಹಲ್ಲೆ

ಮಡಿಕೇರಿ:ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹಾಲುಗುಂದ ಗ್ರಾಮ ಪಂಚಾಯಿತಿ ಕೊಂಡಂಗೇರಿಯಲ್ಲಿ ಯುವಕನೋರ್ವ ಮಹಿಳೆಯ ಚಿನ್ನವನ್ನು ಅಪಹರಣ ಮಾಡಿ ಪರಾರಿಯಾಗಿದ್ದನು. ಮಹಿಳೆಯನ್ನು ಹಲ್ಲೆ ಮಾಡಿ ಚಿನ್ನವನ್ನು ದೋಚಿ ಪರಾರಿಯಾಗಿದ್ದ ಯುವಕನನ್ನು ಗ್ರಾಮಸ್ಥರು ಪತ್ತೆ ಹಚ್ಚಿ ಮಾರಾಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.ಚಿನ್ನಾಭರಣವನ್ನು ದೋಚಿರುವ ಯುವಕನು ಪಾಲಿಬೆಟ್ಟದ ಮೂಲದವ ಎನ್ನಲಾಗುತ್ತಿದ್ದೆ‌. ಗ್ರಾಮಸ್ಥರಿಂದ ಗೂಸಾ ತಿಂದ ಯುವಕನನ್ನು ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆ ಸೇರಿಸಲಾಗಿದೆ.