ಯಾವಾಗಲೂ ಮಂಕಾಗಿದ್ದೀರಾ!

ಯಾವಾಗಲೂ ಮಂಕಾಗಿದ್ದೀರಾ!

ಯಾವಾಗಲೂ ಮಂಕಾಗಿರುವುದು, ಸುಸ್ತು, ನಿದ್ರೆ ಹೆಚ್ಚು, ತಲೆ ಸುತ್ತು, ತಲೆನೋವು, ಕೈಕಾಲುಗಳು ಭುಜ ಕತ್ತಿನ ಸ್ನಾಯುಗಳ ನೋವು ಈ ಸಮಸ್ಯೆಯಿಂದ ನೀವು ಬಳಲುತ್ತಿದ್ದೀರಾ? ಇದಕ್ಕೆ ಕಾರಣ ವಿಟಮಿನ್ ಡಿ ಕೊರತೆ. ಇತ್ತೀಚಿನ ದಿನದಲ್ಲಿ ಹೆಚ್ಚಾಗಿ ಕಾಡುವ ವಿಟಮಿನ್ ಡಿ ಕೊರತೆಗೆ ಅಮ್ಮನ ಮನೆ ಮದ್ದು ಒಂದಿಷ್ಟು ತಿಳಿದುಕೊಳ್ಳೋಣ. ದಿನ ಬೆಳಕಿನ ಎಳೆ ಬಿಸಿಲನ್ನು 20 ನಿಮಿಷದ ಕಾಲ ನಡಿಗೆಯ ಮೂಲಕ ಅಥವಾ ವ್ಯಾಯಾಮದ ಮೂಲಕ ಅಥವಾ ಹಾಗೆ ಸುಮ್ಮನೆ ಅನುಭವಿಸಿ. ಮಶ್ರೂಮ್ ಹೆಚ್ಚಾಗಿ ಸೇವಿಸಬೇಕು. ದಿನಕ್ಕೆ ಒಂದು ಲೋಟ ಹಾಲು, ಕಬ್ಬಿನ ಜ್ಯೂಸ್, ಹಾಗೆ ದಿನಕ್ಕೊಂದು ಮೊಟ್ಟೆ, ಪನೀರ್ ಇಂತವುಗಳ ಸೇವನೆಯನ್ನು ಮಾಡುವುದರೊಂದಿಗೆವಿಟಮಿನ್ ಡಿ ಕೊರತೆಯನ್ನು ನೀಗಿಸಿಕೊಳ್ಳಬಹುದು.

(ವನಿತಾ ಚಂದ್ರಮೋಹನ್ ಕುಶಾಲನಗರ)