ಹಸು ಕಳ್ಳತನ ಪ್ರಕರಣ: ಕೊಂಡಂಗೇರಿ ಗ್ರಾಮದ ಮೂವರ ಬಂಧನ

ಹಸು ಕಳ್ಳತನ ಪ್ರಕರಣ: ಕೊಂಡಂಗೇರಿ ಗ್ರಾಮದ ಮೂವರ ಬಂಧನ

ಮಡಿಕೇರಿ : ದಿನಾಂಕ -09-2025 ರಂದು ಮೈತಾಡಿ ಗ್ರಾಮದ ನಿವಾಸಿಯಾದ ಶ್ರೀ ಬೊಳ್ಳಪಂಡ ಎಂ.ಭೀಮಯ್ಯ. ರವರ ಒಂದು ಹಸು ಕಳ್ಳತನವಾಗಿರುವ ಕುರಿತು ದೂರು ಸ್ವೀಕರಿಸಿದ್ದು, ವಿರಾಜಪೇಟೆ ಗ್ರಾಮಾಂತರ ಪೊಲೀಸ್ : 303(1) 22 & 4, 5, 12 The Karnataka Prevention of Slaughter & Preservation of cattle Act-2020 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಾಗಿತ್ತು.

ಸದರಿ ಪ್ರಕರಣದ ಆರೋಪಿಗಳ ಪತ್ತೆಗಾಗಿ ಶ್ರೀ ಮಹೇಶ್ ಕುಮಾರ್.ಎಸ್, ಡಿಎಸ್‌ಪಿ, ವಿರಾಜಪೇಟೆ ಉಪವಿಭಾಗ, ಶ್ರೀ ಅನೂಪ್ ಮಾದಪ್ಪ.ಪಿ, ಸಿಪಿಐ, ವಿರಾಜಪೇಟೆ ವೃತ್ತ, ಶ್ರೀಮತಿ ಲತಾ.ಎನ್.ಜೆ, ಪಿಎಸ್‌ಐ, & ಶ್ರೀಮತಿ ವಾಣಿಶ್ರೀ, ಪಿಎಸ್‌ಐ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳಾದ ಶ್ರೀ ಸಾಜನ್, ಶ್ರೀ ಜೋಸ್ ನಿಶಾಂತ್, ಶ್ರೀ ಸಂತೋಷ್ ಚೌಹನ್, ಶ್ರೀ ಅಬ್ದುಲ್ ಮಜೀದ್, ಶ್ರೀ ಬೋಪಣ್ಣ ರವರುಗಳ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ದಿ: 13-09-2025 ರಂದು ಈ ಕೆಳಕಂಡ 03 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ.

ಆರೋಪಿಗಳ ವಿವರ: 1. ಮೊಹಮ್ಮದ್ ಆಶಿಕ್, 22 ವರ್ಷ, ಕೊಂಡಂಗೇರಿ ಗ್ರಾಮ, ವಿರಾಜಪೇಟೆ ತಾ.

2. ಶಾಹಿದ್, 25 ವರ್ಷ, ಕೊಂಡಂಗೇರಿ ಗ್ರಾಮ, ವಿರಾಜಪೇಟೆ ತಾ.

 3. ಹ್ಯಾರೀಸ್, 34 ವರ್ಷ, ಕೊಂಡಂಗೇರಿ ಗ್ರಾಮ, ವಿರಾಜಪೇಟೆ ತಾ॥

ವಶಪಡಿಸಿಕೊಂಡ ಸ್ವತ್ತುಗಳ ವಿವರ; 1) 2 . 2.600.ನಗದು

ಸದರಿ ಪ್ರಕರಣದ ಆರೋಪಿ ಹ್ಯಾರೀಸ್ ಎಂಬಾತನು 2024 ನೇ ಸಾಲಿನಲ್ಲಿ ಸಿದ್ದಾಪುರ ಪೊಲೀಸ್ : 379, 34 22 & 12 The Karnataka Prevention of Slaughter & Preservation of Cattle Act-2020 ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿರುತ್ತದೆ. ಸದರಿ ಪ್ರಕರಣದ ಆರೋಪಿಗಳನ್ನು ಪತ್ತೆ ಮಡುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿರವರುಗಳನ್ನು ಶ್ರೀ ಕೆ.ರಾಮರಾಜನ್, ಐಪಿಎಸ್, ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ಮತ್ತು ಶ್ರೀ ದಿನೇಶ್ ಕುಮಾರ್.ಬಿ.ಪಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ರವರು ಶ್ಲಾಘಿಸಿದ್ದಾರೆ.