ಮಸಾಜ್ ನೆಪದಲ್ಲಿ ವೇಶ್ಯಾವಾಟಿಕೆ:ನಾಲ್ವರ ಬಂಧನ

ಮಸಾಜ್ ನೆಪದಲ್ಲಿ ವೇಶ್ಯಾವಾಟಿಕೆ:ನಾಲ್ವರ ಬಂಧನ

ವಿರಾಜಪೇಟೆ: ವಿರಾಜಪೇಟೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಧಿನಗರದಲ್ಲಿನ ಆರೆಂಜ್ ಫ್ಯಾಮಿಲಿ ಬ್ಯೂಟ ಪಾಲರ್ & ಸ್ವಾ ಎಂಬ ಹೆಸರಿನಲ್ಲಿ ಮಸಾಜ್ ನೆಪದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಕುರಿತು ಮಾಹಿತಿ ಸಂಗ್ರಹಿಸಿ ದಿನಾಂಕ: 18-09-2025 ರಂದು ದಾಳಿ ನಡೆಸಿ 04 ಮಹಿಳೆಯರನ್ನು ರಕ್ಷಣೆ ಮಾಡಿ ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಸೇರಿಸಲಾಗಿದೆ. ಹಾಗೂ ವೇಶ್ಯಾವಾಟಿಕೆ ನಡೆಸುತ್ತಿದ್ದ ಈ ಕೆಳಕಂಡ 04 ಜನ ಆರೋಪಿಗಳ ಮೇಲೆ ವಿರಾಜಪೇಟೆ ನಗರ 3, 4, 5(2), 7 Immortal Traffic (Prevention) Act ಪ್ರಕರಣ ದಾಖಲಾಗಿದೆ.

ಸದರಿ ಪ್ರಕರಣದ ಆರೋಪಿಗಳನ್ನು ಡಿಎಸ್ಪಿ ಮಹೇಶ್ ಕುಮಾ‌ರ್, ಅನೂಪ್ ಮಾದಪ್ಪ ಪಿ, ಸಿಪಿಐ, ವಿರಾಜಪೇಟೆ ವೃತ್ತ, ಪ್ರಮೋದ್, ಪಿಎಸ್‌ಐ ವಿರಾಜಪೇಟೆ ನಗರ ಪೊಲೀಸ್ ಠಾಣೆ, ಲತಾ.ಎನ್.ಜೆ. ಪಿಎಸ್.ಐ. ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳ ವಿಶೇಷ ತನಿಖಾ ತಂಡ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ 18-09-2025 ರಂದು ಈ ಕೆಳಕಂಡ 04 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.

 ಆರೋಪಿಗಳ ವಿವರ:

 1. ಪ್ರದೀಪನ್.ಪಿ.ಪಿ. 48 ವರ್ಷ, ಕಣ್ಣೂರು ಜಿಲ್ಲೆ, ಕೇರಳ ರಾಜ್ಯ,

 2. ಕಲೇಶ್ ಕುಮಾರ್, 45 ವರ್ಷ, ಕಣ್ಣೂರು ಜಿಲ್ಲೆ, ಕೇರಳ ರಾಜ್ಯ

3. ಶಾಜಿ, 38 ವರ್ಷ, ಕಣ್ಣೂರು ಜಿಲ್ಲೆ ಕೇರಳ ರಾಜ್ಯ

4. ನೆಲ್ಲಮಕ್ಕಡ.ಎ. ಪೊನ್ನಣ್ಣ, 48 ವರ್ಷ, ಅಮ್ಮತ್ತಿ ಗ್ರಾಮ,

 ವಿರಾಜಪೇಟೆ ತಾ| ಸದರಿ ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿರವರುಗಳನ್ನು ಕೆ.ರಾಮರಾಜನ್, ಐಪಿಎಸ್, ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ಮತ್ತು ದಿನೇಶ್ ಕುಮಾ‌ರ್.ಬಿ.ಪಿ. ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ರವರು ಶ್ಲಾಘಿರಿಸಿದ್ದಾರೆ.