ಕೊಡ್ಲಿಪೇಟೆ: ಪಡಿತರ ಅಕ್ಕಿ ಮಾರಾಟ ಮಾಡದಂತೆ ಜಾಗೃತಿ ಮೂಡಿಸಿದ ಆಹಾರ ನಿರೀಕ್ಷಕರು

ಕೊಡ್ಲಿಪೇಟೆ :ಇಲ್ಲಿನ ಕೃಷಿ ಪತ್ತಿನ ಸಹಕಾರ ಸಂಘದಲ್ಲಿರುವ ನ್ಯಾಯ ಬೆಲೆ ಅಂಗಡಿಗೆ ಭೇಟಿ ನೀಡಿದ ತಾಲೂಕು ಆಹಾರ ನಿರೀಕ್ಷಕರಾದ ಯಶಸ್ವಿನಿ ಅವರು ಫಲಾನುಭವಿಗಳ ಸಬೆ ನಡೆಸಿ ಅಹವಾಲು ಆಲಿಸಿ, ಕಾಳ ಸಂತೆಯಲ್ಲಿ ಪಡಿತರ ಅಕ್ಕಿಯನ್ನು ಮಾರಾಟದಂತೆ ಜಾಗೃತಿ ಮೂಡಿಸಿದರು. ಅಕ್ಕಿ ಮಾರಾಟ ಮಾಡುವುದು ಕಂಡು ಬಂದಲ್ಲಿ ಮಾರಾಟ ಮಾಡಿದವರ ಮತ್ತು ತೆಗೆದುಕೊಂಡವರ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು. ಈ ಸಂದರ್ಭದಲ್ಲಿ ಗ್ರಾಹಕರುಗಳು ಅಕ್ಕಿ ವ್ಯಾಪಾರಸ್ಥರಿಗೆ ರೇಷನ್ ಅಕ್ಕಿಯನ್ನು ಮಾರಾಟ ಮಾಡುತ್ತಿರುವುದಾಗಿ ದೂರಿದರು. ಈ ಸಂದರ್ಭದಲ್ಲಿ ತಾಲೂಕು ಆಹಾರ ನಿರೀಕ್ಷಕರ ಕಚೇರಿ ಸಿಬ್ಬಂದಿ ವಿನೋದ್ ಕುಮಾರ್ ,ವಿಎಸ್ಸೆಎಸ್ಸೆಎನ್ ನ್ಯಾಯ ಬೆಲೆ ಅಂಗಡಿಯ ನಿರ್ವಾಹಕ ಶಶಿ , ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರುಗಳಾದ ಕೆ.ಆರ್.ಚಂದ್ರಶೇಖರ್ ,ಪುಷ್ಪಲತಾ ,ಗ್ರಾಹಕರಾದ ಅನಿಲ್, ಅರುಣಾ ,ಹಾಲಪ್ಪ ,ಕೇಶವ,ರಘು ಮುಂತಾದವರು ಇದ್ದರು.