ಕಡಂಗ ಶಾಖೆಯ SYS ನೂತನ ಅಧ್ಯಕ್ಷರಾಗಿ ಮುಹಮ್ಮದ್ ನಿಝಾರ್ ಸಖಾಫಿ ಆಯ್ಕೆ

ಕಡಂಗ ಶಾಖೆಯ SYS ನೂತನ ಅಧ್ಯಕ್ಷರಾಗಿ ಮುಹಮ್ಮದ್ ನಿಝಾರ್ ಸಖಾಫಿ ಆಯ್ಕೆ
ಅಧ್ಯಕ್ಷ

ಕಡಂಗ:ಭಾನುವಾರ ಮಗ್ರಿಬ್ ನಮಾಝ್ ನಂತರ ಕಡಂಗ ಬದ್ರಿಯಾ ಸುನ್ನೀ ಸೆಕೆಂಡರಿ ಮದ್ರಸದಲ್ಲಿ ಕಡಂಗ ಎಸ್‌ವೈಎಸ್ ಶಾಖೆಯ ಮಹಾಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸಯ್ಯಿದ್ ಮಹ್ದಿ ಲತ್ವೀಫಿ ತಂಙಳ್ ಚೋಕಂಡಳ್ಳಿ ವಹಿಸಿದ್ದರು. ಸ್ವಾಗತ ವರದಿ ವಾಚನೆಯನ್ನು ಶಾಖೆಯ ಅಧ್ಯಕ್ಷರಾಗಿದ್ದ ಅಶ್ರಫ್ ಸಿಎ ನಿರ್ವಹಿಸಿದರು. ಲೆಕ್ಕ ಪತ್ರ ಮಂಡನೆಯನ್ನು ಫೈನಾನ್ಸ್ ಸೆಕ್ರೆಟರಿ ರಝಾಕ್ ಸಿಎ ಮಂಡಿಸಿದರು.

2025-27 ನೇ ಸಾಲಿನ ಕಡಂಗ ಶಾಖೆಯ ನೂತನ ಸಮಿತಿಯ ಅಧ್ಯಕ್ಷರಾಗಿ ಸಿ.ಎ ಮುಹಮ್ಮದ್ ನಿಝಾರ್ ಸಖಾಫಿ ಅಫ್ಳಲ್ ಸಅದಿ ಉಪಾಧ್ಯಕ್ಷರಾಗಿ ಝೈನುದ್ದೀನ್ ಪಿ ಹೆಚ್, ಪ್ರಧಾನ ಕಾರ್ಯದರ್ಶಿ ಶಮೀರ್ ಸಿ ಎ ಫೈನಾನ್ಸ್ ಸೆಕ್ರೆಟರಿಯಾಗಿ ನಾಸರ್ ಪಿ ಎಂ,ದಅವಾ & ಟ್ರೈನಿಂಗ್ ಸೆಕ್ರೆಟರಿಯಾಗಿ ರಫೀಕ್ ಸಿ ಎ,ಸಾಂತ್ವನ ವಿಭಾಗದಲ್ಲಿ ರಾಝಿಕ್ ಪಿ ಎ ಆಯ್ಕೆಯಾದರು. ಕಾರ್ಯಕಾರಿಣಿ ಸದಸ್ಯರಾಗಿ ರಾಶಿದ್ ಯು ಇ,ರಾಝಿಕ್ ಎ ಬಿ ಆರ್, ಸುಹೈಲ್ ಪಿ ಎ ,ಸಿದ್ದೀಕ್ ಬೇತ್ರಿ ಎಂ ಎಂ,ನಿಝಾರ್ ಯು ಎ,ಯುನುಸ್ರವರನ್ನು ಆಯ್ಕೆ ಮಾಡಲಾಯಿತು.