ಸೋಮವಾರಪೇಟೆ: ಅಕ್ರಮವಾಗಿ ಗಾಂಜಾ ಮಾರಾಟಕ್ಕೆ ಯತ್ನ :ಆರೋಪಿ ಅರೆಸ್ಟ್

ಸೋಮವಾರಪೇಟೆ: ಪಟ್ಟಣದ ಹಾನಗಲ್ಲು ರಸ್ತೆಯ ಜಾನಕಿ ಕನ್ವೆನ್ಷನ್ ಹಾಲ್ ಬಳಿ ಅಕ್ರಮವಾಗಿ ಗಾಂಜಾ ಮಾರಾಟಕ್ಕೆ ಯತ್ನಿಸಿದ್ದ ರೂಪಿಸಿದ್ದ ಚೌಡ್ಲು ಗ್ರಾಮದ ಆಲೆಕಟ್ಟೆ ರಸ್ತೆಯ ನಿವಾಸಿ ಬಶೀರ್ ಅವರ ಮಗ ರಮೀಜ್ ಎಂಬಾತನನ್ನು ಸೋಮವಾರಪೇಟೆ ವೃತ ನಿರೀಕ್ಷಿಕ ಮುದ್ದು ಮಾದೇವ ಅವರ ನೇತೃತ್ವದಲ್ಲಿ ಪಿ.ಎಸ್.ಐ ಗೋಪಾಲ್ ಹಾಗೂ ಸಿಬ್ಬಂದಿಗಳಾದ ಅನಂತ್, ಶರತ್, ಪ್ರವೀಣ್, ಸಾಜನ್, ಲೋಕೇಶ್, ಚನ್ನವೀರ, ಲೀಲಾಂಬಿಕೆ ತಂಡವು ಆಟೋಪಿಯನ್ನು ಬಂಧಿಸಿದ್ದು. ಆರೋಪಿಯಿಂದ 600 ಗ್ರಾಂ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ ಟಾಟಾ ಏಸ್ ವಾಹನವನ್ನು ವಶಪಡಿಸಿಕೊಂಡ ಪೊಲೀಸರು, ರಮೀಜ್ ಅವರನ್ನು ಸೋಮವಾರಪೇಟೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.