ಸುಂಟಿಕೊಪ್ಪ: ಯುವ ಫುಟ್ಬಾಲ್ ಆಟಗಾರ ಆತ್ಮಹತ್ಯೆ

Jul 8, 2025 - 22:40
 0  395
ಸುಂಟಿಕೊಪ್ಪ: ಯುವ ಫುಟ್ಬಾಲ್ ಆಟಗಾರ ಆತ್ಮಹತ್ಯೆ

ಮಡಿಕೇರಿ: ಕೊಡಗು ಜಿಲ್ಲೆಯ ಉದಯೋನ್ಮುಖ ಯುವ ಫುಟ್ಬಾಲ್ ಆಟಗಾರ(ಗೋಲ್ ಕೀಪರ್) ಕಿರಣ ಸುಂಟಿಕೊಪ್ಪದ ಬೆಟ್ಟಗೇರಿ ಎಸ್ಟೇಟ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.

ತೋಟದ ಎಸ್ಟೇಟ್ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು,ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.ಕೊಡಗು ಜಿಲ್ಲೆಯಲ್ಲಿ ಪ್ರತಿಷ್ಠಿತ ಫುಟ್ಬಾಲ್ ತಂಡಗಳಲ್ಲಿ ಗೋಲ್ ಕೀಪರ್ ಆಗಿ ಉತ್ತಮ ಪ್ರದರ್ಶನ ನೀಡಿರುವ ಕಿರಣ ಎಲ್ಲರ ಫೇವರೇಟ್ ಗೋಲ್ ಕೀಪರ್ ಆಗಿ ಹಲವು ಪ್ರಶಸ್ತಿಯನ್ನು ಜಯಿಸಿದ್ದಾನೆ.ಅದಲ್ಲದೇ ಸ್ವೌಮ್ಯ ಸ್ವಭಾವದಿಂದ ಎಲ್ಲರ ಮನೆ ಗೆದ್ದಿರುವ ಕೊಡಗಿನ ಯುವ ಫುಟ್ಬಾಲ್ ಆಟಗಾರನ ಆತ್ಮಹತ್ಯೆಗೆ ಇದೀಗ ಕೊಡಗು ಜಿಲ್ಲೆಯ ಫುಟ್ಬಾಲ್ ಆಟಗಾರರಿಗೆ ದೊಡ್ಡ ಶಾಕ್ ಕೊಟ್ಟಿದೆ.

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 1
Sad Sad 3
Wow Wow 0