ವಿರಾಜಪೇಟೆ: ಗಾಂಜಾ ಸಾಗಾಟಕ್ಕೆ ಯತ್ನ ಇಬ್ಬರ ಬಂಧನ: ಏಳು ಕೆ.ಜಿ ಗಾಂಜಾ ಪತ್ತೆ

ವಿರಾಜಪೇಟೆ: ಗಾಂಜಾ ಸಾಗಾಟಕ್ಕೆ ಯತ್ನ ಇಬ್ಬರ ಬಂಧನ:  ಏಳು ಕೆ.ಜಿ ಗಾಂಜಾ ಪತ್ತೆ

ವಿರಾಜಪೇಟೆ:ಆಗಸ್ಟ್ 09ರಂದು ವಿರಾಜಪೇಟೆ ನಗರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಆರ್ಜಿ ಗ್ರಾಮದ ಪೆರುಂಬಾಡಿ ಮಾರ್ಗವಾಗಿ ಕೇರಳ ರಾಜ್ಯಕ್ಕೆ ಅಕ್ರಮವಾಗಿ ನಿಷೇಧಿತ ಮಾದಕ ವಸ್ತುವಾದ ಗಾಂಜಾ ಪದಾರ್ಥವನ್ನು ಮಾರಾಟ ಮಾಡಲು ಯತ್ನಿಸಿದ ಅನೀಸ್ ಅಹ್ಮದ್ (45) ವಿಜಯನಗರ, ಹುಣಸೂರು ಟೌನ್, ಹುಣಸೂರು ತಾಲೂಕು,ಚೇತನ್ ಪಿ, (40), ವಾಸ ಸ್ಕೋರ್ ಬೀದಿ, ಹುಣಸೂರು ಟೌನ್, ಹುಣಸೂರು ತಾಲೂಕು, ಇವರನ್ನು ಬಂಧಿಸಿ ಕ್ರಮಕೈಗೊಳ್ಳಲಾಗಿದೆ. ಬಂಧಿತರಿಂದ ಸ್ವಿಫ್ಟ್ ಕಾರು, 07 ಕೆ.ಜಿ ,872 ಗ್ರಾಂ ತೂಕದ ಗಾಂಜಾ ಪದಾರ್ಥ(ಅಂದಾಜು 2,50,000 ಮೌಲ್ಯ),ನಾಲ್ಕು ಗಾಂಜಾ ಪ್ಯಾಕೇಟ್ ಗಳು,ಒಂದು ಮೊಬೈಲ್ ಫೋನ್,ಬಿಳಿ ಬಣ್ಣದ ಪ್ಯಾಸ್ಟಿಕ್ ಚೀಲವನ್ನು ವಶಪಡಿಸಿಕೊಳ್ಳಲಾಗಿದೆ.