ಅರ್ವತ್ತೋಕ್ಲು ಹೆರವನಾಡು ನೂತನ ರಸ್ತೆ ಸರ್ವೆಕಾರ್ಯ ಮುಕ್ತಾಯ

ಮಡಿಕೇರಿ:ವಿರಾಜಪೇಟೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಬೆಟ್ಟಗೇರಿ ಪಂಚಾಯತಿಗೆ ಸೇರಿದ ಅರ್ವತ್ತೋಕ್ಲು ಹೆರವನಾಡು ಸಂಪರ್ಕಿಸುವ ನೂತನ ರಸ್ತೆ ಸರ್ವೆಕಾರ್ಯವನ್ನು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನಡೆಸಿದರು.ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಜಯಣ್ಣ ಮತ್ತು ಸಹಾಯಕ ಅಭಿಯಂತರಾದ ರಘು ರವರ ನೇತೃತ್ವದಲ್ಲಿ ಸರ್ವೆ ಕಾರ್ಯನಡೆಯಿತು.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ನವರ ನಿರ್ದೇಶನದ ಮೇರೆಗೆ ಮಡಿಕೇರಿ ಭಾಗಮಂಡಲ ಮುಖ್ಯರಸ್ತೆಯ ಅಪ್ಪಂಗಳದಿಂದ ಅರ್ವತ್ತೋಕ್ಲು ಗ್ರಾಮಕ್ಕೆ ಎರಡು ಕಿ.ಮೀ ಉದ್ದದ ರಸ್ತೆಯನ್ನು ಹೊಸದಾಗಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಸಹಾಯಕ ಕಾರ್ಯಪಾಲಕ ಅಭಿಯಂತರಾದ ಜಯಣ್ಣ ರವರು ಮಾಹಿತಿ ನೀಡಿದ್ದಾರೆ.ಡಿಸೆಂಬರ್ ಅಂತ್ಯದ ಒಳಗೆ ನೂತನ ರಸ್ತೆ ಸಾರ್ವಜನಿಕ ಬಳಕೆ ಲಭ್ಯವಾಗಲಿದೆ ಎಂದು ತಿಳಿಸಿದರು.
ಕಳೆದ ಮೂರು ದಶಕಗಳ ಕಾಲದಿಂದ ಈ ಭಾಗದ ಜನರು ಕಂಡ ಕನಸು ಎ.ಎಸ್.ಪೊನ್ನಣ್ಣ ನವರ ಕೃಪೆಯಿಂದ ನನಸಾಗುತ್ತಿದೆ ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ ರವರು ಹರ್ಷ ವ್ಯಕ್ತಪಡಿಸಿದರು.ಸ್ಥಳೀಯರಾದ ಪೂಜಾರಿರ ಹರ್ಷಕೇಶವ ನವರು ಮಾತನಾಡಿ ಇದೊಂದು ಬಹುಪಯೋಗಿ ರಸ್ತೆಯಾಗಿದ್ದು ತಮ್ಮ ಬೇಡಿಕೆಗೆ ಸೂಕ್ತ ಸ್ಪಂದನೆ ನೀಡಿದ ಪೊನ್ನಣ್ಣ ರವರಿಗೆ ಈ ಭಾಗದ ಜನತೆ ಅಭಾರಿಯಾಗಿದ್ದಾರೆ ಎಂದು ತಿಳಿಸಿದರು.
ಮಡಿಕೇರಿ ತಾಲ್ಲೂಕು ಅಕ್ರಮ ಸಕ್ರಮ ಸಮಿತಿಯ ಸದಸ್ಯರಾದ ಕೇಟೋಳಿ ಮೋಹನ್ ರಾಜ್ ,ಪ್ರಮುಖರಾದ ಪೂಜಾರಿರ ಪ್ರದೀಪ್ ಕುಮಾರ್,ಬಾಳಾಡಿ ಪ್ರತಾಪ್ ಕುಮಾರ್,ಮುಂಜಾಂದಿರ ಸದಾ,ಗೋವಿಂದಮ್ಮನ ಕುಟ್ಟಪ್ಪ,ತಳೂರು ಉದಯ್ ಕುಮಾರ್
ಶಂಕರ ನಾರಾಯಣ ಹೆಬ್ಬಾರ್ ಸೇರಿದಂತೆ ಸ್ಥಳೀಯರು ಸರ್ವೆ ಕಾರ್ಯ ನಡೆಯುವಾಗ ಉಪಸ್ಥಿತರಿದ್ದರು.