ಎಮ್ಮೆಮಾಡು ಗ್ರಾಮ ಪಂಚಾಯಿತಿಗೆ ಅಸ್ಸಾಂ ರಾಜ್ಯ ಸರಕಾರದ ಪ್ರತಿನಿಧಿಗಳ ಭೇಟಿ

ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು :ಎಮ್ಮೆಮಾಡು ಗ್ರಾಮ ಪಂಚಾಯಿತಿಯ ಸುಧಾರಿತ ಆಡಳಿತ ಮತ್ತು ಅಂಗನವಾಡಿ ಪೋಷಣ ಅಭಿಯಾನದಲ್ಲಿ ಉತ್ತಮ ಪ್ರಗತಿಯನ್ನು ಗುರುತಿಸಿ ಅಸ್ಸಾಂ ರಾಜ್ಯ ಸರಕಾರದ ಪ್ರತಿನಿಧಿಗಳು ಎಮ್ಮೆಮಾಡು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದರು.
ಅಸ್ಸಾಂ ರಾಜ್ಯಸರ್ಕಾರದ ಪ್ರತಿನಿಧಿಗಳಾದ ಸಬೀತಾ ರಾಥೋಡ್, ಮಲ್ಲಿಕಾ,ಪದ್ಮಜಾ ಸಿಡಿಪಿಒ ರವರು ಕೊಡಗು ಜಿಲ್ಲೆಯಲ್ಲಿ ಆಯ್ಕೆಯಾದ ಎಮ್ಮೆಮಾಡು ಗ್ರಾಮ ಪಂಚಾಂಯಿತಿಗೆ ಭೇಟಿನೀಡಿ ಪಂಚಾಯಿತಿಯ ಆಡಳಿತ ಸುಧಾರಣೆ ಮತ್ತು ಬಾಪೂಜಿ ಸೇವಾ ಕೇಂದ್ರದಿಂದ ಸಾರ್ವಜನಿಕರಿಗೆ ಸಿಗುವ ಸೌಲಭ್ಯಗಳವಿವರಗಳನ್ನು ಪಡೆದರು.ಬಳಿಕಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪೋಷಣ ಅಭಿಯಾನದ ಮಾಹಿತಿಯನ್ನು ಪಡೆದುಕೊಂಡು ಪಂಚಾಯಿತಿಯು ತೆಗೆದುಕೊಂಡಿರುವ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಮೊದಲಿಗೆ ಎಮ್ಮೆಮಾಡು ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಮತ್ತು ಸದಸ್ಯರುಗಳು ಹಾಗೂ ಸಿಬ್ಬಂದಿ ವರ್ಗದವರು ಅಸ್ಸಾಂ ರಾಜ್ಯ ಸರ್ಕಾರದ ಪ್ರತಿನಿಧಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಈ ಸಂದರ್ಭ ಎಮ್ಮೆಮಾಡು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಐಸಮ್ಮ,ನ್ಯಾಯ ಸಮಿ
ತಿ ಅಧ್ಯಕ್ಷರುಗಳಾದ ಗಫೂರ್,ಚೆಕ್ಕೇರಇಸ್ಮಾಯಿಲ್,ಟಿ.ಕೆ.ಯೂಸುಫ್, ಮಾಹಿನ್ ಕನ್ನಡಿಯಂಡ,ಪಿ.ಎ.ಆಯಿಷಾ, ಹಫ್ಸತ್ ಕಂಬೇರ, ಅಭಿವೃದ್ಧಿ ಅಧಿಕಾರಿಚೋಂದಕ್ಕಿ,ಕಾರ್ಯದರ್ಶಿ ಪಾರ್ವತಿ, ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸೀತಾ ಲಕ್ಶ್ಮಿ, ತಾಲೂಕು ಸಹಾಯಕ ಪ್ರಭಾರ ಶಿಶು ಅಭಿವೃದ್ಧಿಯೋಜನಾಧಿಕಾರಿ ಕೆ. ಶೀಲಾ ಹಾಗೂ ಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.