ಬಲ್ಯಮಂಡೂರು:ಪ್ರಸಿದ್ಧ ಮಂದಣ್ಣ ಮೂರ್ತಿ ದೇವರ ವಾರ್ಷಿಕೋತ್ಸವ

ಪೊನ್ನಂಪೇಟೆ: ತಾಲೂಕಿನ ಬಲ್ಯಮುಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಡಿಕೇರಿ ಎಂಬಲ್ಲಿ ಸುಮಾರು 800 ವರ್ಷಗಳ ಇತಿಹಾಸ ಪ್ರಸಿದ್ಧ ಮಂದಣ್ಣ ಮೂರ್ತಿ ದೇವರ ವಾರ್ಷಿಕೋತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು. ಗ್ರಾಮದ ಚಂಡಂಗಡ ಕುಟುಂಬಸ್ಥರ ಅಧ್ಯಕ್ಷರಾದ ಪ್ರವೀಣ್ ಅವರ ಮುಂದಾಳತ್ವದಲ್ಲಿ ಅರ್ಚಕರಾದ ಪಾರ್ಥ ಹಾಗೂ ಪ್ರತು ಅವರು, ಚಂಡಂಗಡ ಕುಟುಂಬದ ಐನ್ ಮನೆಯಲ್ಲಿ ಮಾಗುರುವಿಗೆ ಪೂಜೆ ಸಲ್ಲಿಸಿ, ಕೊಡಗಿನ ಸಾಂಪ್ರದಾಯಿಕ ವಾಲಗದೊಂದಿಗೆ ಮೆರವಣಿಗೆಯ ಮೂಲಕ ಮಂದಣ್ಣ ಮೂರ್ತಿ ದೇವರ ಸ್ಥಾನಕ್ಕೆ ಬಂದು ವಿವಿಧ ಪೂಜಾ ಕೈಂಕಯಗಳನ್ನು ನೆರವೇರಿಸಿ, ದೇವರಿಗೆ ಹರಕೆ ಕಾಣಿಕೆ ಒಪ್ಪಿಸಿದರು.
ಈ ಸಂದರ್ಭ ಮಾತನಾಡಿದ ಚಂಡಂಗಡ ಕುಟುಂಬಸ್ಥರ ಅಧ್ಯಕ್ಷ ಚಂಡಂಗಡ ಪ್ರವೀಣ್ ಅವರು, ಮಾಗುರು ಹಾಗೂ ಮಂದಣ್ಣ ಮೂರ್ತಿ ಉತ್ಸವವನ್ನು ಸುಮಾರು 50 ವರ್ಷಗಳಿಂದಲೂ ಹಿರಿಯರು ನಡೆಸಿಕೊಂಡು ಬರುತ್ತಿದ್ದು, ಚಂಡಂಗಡ ನಾಲ್ಕು ಕುಟುಂಬಸ್ಥರಾದ ಪ್ರವೀಣ್, ಪಾರ್ಥ, ಪ್ರತು, ನಂದ, ವಚನ್ ಸೇರಿದಂತೆ ತವರು ಮನೆಯವರು, ಗ್ರಾಮಸ್ಥರು ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಅಜ್ಜಿಕುಟ್ಟಿರ ಪೊನ್ನಣ್ಣ ಅವರು ಇತ್ತೀಚೆಗೆ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಸ್ಥಾನದ ಅಭಿವೃದ್ಧಿಗೆ ಕೈ ಜೋಡಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.ದೇವರ ಉತ್ಸವದಲ್ಲಿ ಕುಟುಂಬಸ್ಥರು, ಗ್ರಾಮಸ್ಥರು, ಹಾಗೂ ನೆಂಟರಿಷ್ಟರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತೀರ್ಥ ಪ್ರಸಾದ ಸ್ವೀಕರಿಸಿ, ಪುನೀತರಾದರು.
ವರದಿ:-ಚಂಪಾ ಗಗನ, ಪೊನ್ನಂಪೇಟೆ,