ಚೆಟ್ಟಳ್ಳಿ: ಅಬ್ಯಾಲದಲ್ಲಿ ರಸ್ತೆಗೆ ಅಡ್ಡಲಾಗಿ ಬಿದ್ದ ಮರ,ಸಂಚಾರಕ್ಕೆ ತೊಡಕು

ಚೆಟ್ಟಳ್ಳಿ: ಅಬ್ಯಾಲದಲ್ಲಿ ರಸ್ತೆಗೆ ಅಡ್ಡಲಾಗಿ ಬಿದ್ದ ಮರ,ಸಂಚಾರಕ್ಕೆ ತೊಡಕು

ಚೆಟ್ಟಳ್ಳಿ: ಸಮೀಪದ ಅಬ್ಯಾಲದಲ್ಲಿ ಗುರುವಾರ ಬೆಳಗ್ಗೆ ರಸ್ತೆಗೆ ಅಡ್ಡಲಾಗಿ ಮರಬಿದ್ದು ಕೆಲಕಾಲ ಸಂಚಾರಕ್ಕೆ ತೊಡಕುವುಂಟಾಗಿತ್ತು.ಅರ್ಧಗಂಟೆಗೂ ಅಧಿಕ ಸಮಯ ರಸ್ತೆಯಲ್ಲೇ ವಾಹನಗಳು ಸರತಿ ಸಾಲಿನಲ್ಲಿ ನಿಂತು,ಕಿರಿದಾದ ರಸ್ತೆಯಲ್ಲಿ ಸಂಚರಿಸಲು ಪರದಾಡುತ್ತಿದ್ದರು.ಸ್ಥಳೀಯರು ಸೇರಿ ಮರವನ್ನು ತೆರವುಗೊಳಿಸಿದರು.

ಸಿದ್ದಾಪುರ-ಚೆಟ್ಟಳ್ಳಿ-ಮಡಿಕೇರಿ ಸಂಪರ್ಕ ಕಲ್ಪಿಸುವ ಅಬ್ಯಾಲದಲ್ಲಿ ರಸ್ತೆ ಬದಿಯಲ್ಲೇ ಬೃಹತ್ ಮರಗಳು ನಿಂತಿದ್ದು,ಅಪಾಯಕ್ಕೆ ಆಹ್ವಾನ ನೀಡುತ್ತಿದೆ.ರಸ್ತೆ ಬದಿಯಲ್ಲಿರುವ ಮರಗಳನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಹಾಗೂ ವಾಹನ ಸವಾರರು ಆಗ್ರಹಿಸಿದ್ದಾರೆ.